ನವದೆಹಲಿ: ಕರೋನಾ ವೈರಸ್ ಅನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಸಾಂಕ್ರಾಮಿಕ ರೋಗದಿಂದ ದೇಶವನ್ನು ಬೇಗನೆ ಮುಕ್ತಗೊಳಿಸಲು ಸರ್ಕಾರವು ಚಿಕಿತ್ಸೆ ನೀಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಏತನ್ಮಧ್ಯೆ, ಆಯುರ್ವೇದದಲ ಮೂಲಕ ಕರೋನಾ ವೈರಸ್ ಚಿಕಿತ್ಸೆ ಸಾಧ್ಯ ಎಂದು ಆಯುಷ್ ಸಚಿವ ಶ್ರೀಪಾದ್ ನಾಯಕ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಶ್ರೀಪಾದ್ ನಾಯಿಕ್, ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕಾಗಿ ಒಂದು ಕಾರ್ಯಪಡೆ ರಚಿಸಿದ್ದು, ಆಯುರ್ವಾದದ ಸಹಾಯದಿಂದ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು ಸಾಧ್ಯ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಶ್ರೀಪಾದ್ ನಾಯಿಕ್, ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವೈರಸ್ ಚಿಕಿತ್ಸೆಗಾಗಿ ಕಾರ್ಯಪಡೆಯೊಂದನ್ನು ರಚಿಸಿದ್ದು, ಬಳಿಕ ಕೊರೊನಾ ಪಾಸಿಟಿವ್ ರೋಗಿಗಳ ಮೇಲೆ ಇದೀಗ ಆಯುರ್ವೇದ ಮೂಲಕ ಚಿಕಿತ್ಸೆ ನೀಡಲಾಗುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆ ಭಾನುವಾರ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ, ಕಳೆದ 24ಗಂಟೆಗಳಲ್ಲಿ ಕೊರೊನಾ ವೈರಸ್ ನ ಒಟ್ಟು 909 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ಭಾರತದಲ್ಲಿ ಕೊರೊನಾ ಸೋಂಕಿಗೆ ಗುರಿಯಾದವರ ಸಂಖ್ಯೆ 8,356ಕ್ಕೆ ತಲುಪಿದೆ. ಇನ್ನೊಂದೆಡೆ ಕಳೆದ 24ಗಂಟೆಗಳಲ್ಲಿ ಈ ಮಾರಕ ವೈರಸ್ ದಾಳಿಗೆ 34 ಜನ ಬಲಿಯಾಗಿದ್ದು, ದೇಶಾದ್ಯಂತ ಈ ಸಂಖ್ಯೆ 273ಕ್ಕೆ ತಲುಪಿದೆ. ಆದರೆ, ದೇಶದ ಒಟ್ಟು 8,356 ಪ್ರಕರಣಗಳ ಪೈಕಿ ಸುಮಾರು 716 ಮಂದಿ ಗುಣಮುಖರಾಗಿರುವುಎದು ನೆಮ್ಮದಿಯ ಸುದ್ದಿ ಎಂದೇ ಹೇಳಲಾಗುವುದು.
Comments are closed.