ರಾಷ್ಟ್ರೀಯ

ಮೇ 3ರ ವರೆಗೆ ದೇಶದಾದ್ಯಂತ ಮುಂದುವರೆದ ಲಾಕ್‌ಡೌನ್; ಎಲ್ಲಾ ರೈಲು ಸೇವೆಗಳನ್ನೂ ರದ್ದುಗೊಳಿಸಿದ ಭಾರತೀಯ ರೈಲ್ವೆ

Pinterest LinkedIn Tumblr

ನವ ದೆಹಲಿ: ದೇಶದಾದ್ಯಂತ ಲಾಕ್‌ಡೌನ್ ಮೇ 03ರ ವರೆಗೆ ಮುಂದುವರೆದಿರುವ ಕಾರಣ ಈ ಅವಧಿಗೆ ಬುಕ್‌ ಮಾಡಲಾಗಿದ್ದ ಎಲ್ಲಾ ಟಿಕೆಟ್‌ಗಳನ್ನೂ ರದ್ದು ಮಾಡಿರುವ ಭಾರತೀಯ ರೈಲ್ವೆ ಸೇವೆಯನ್ನು ನಿರ್ದಿಷ್ಟ ಅವಧಿಯ ವರೆಗೆ ರದ್ದುಗೊಳಿಸಿ ಬಾರತೀಯ ರೈಲ್ವೆ ಇಲಾಖೆ ಆದೇಶಿಸಿದೆ.

ಪ್ರಧಾನಿ ನರೇಂದ್ರ ಮೋದಿ ಭಾಷಣದ ಬೆನ್ನಿಗೆ ತನ್ನ ಯಾವ ಯಾವ ಸೇವೆ ಲಭ್ಯವಾಗಲಿದೆ? ಯಾವ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಸ್ಪಷ್ಟಣೆ ನೀಡಿದೆ. ಅದರಂತೆ:

1. COVID-19 ಲಾಕ್‌ಡೌನ್ ಮುಂದುವರಿಕೆ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಎಲ್ಲಾ ಕ್ರಮಗಳು ಮುಂದುವರೆಯಲಿವೆ. ಭಾರತೀಯ ರೈಲ್ವೆಯ ಪ್ರೀಮಿಯಂ ರೈಲುಗಳು, ಮೇಲ್ / ಎಕ್ಸ್‌ಪ್ರೆಸ್ ರೈಲುಗಳು, ಪ್ರಯಾಣಿಕರ ರೈಲುಗಳು, ಉಪನಗರ ರೈಲುಗಳು, ಕೊಲ್ಕತ್ತಾ ಮೆಟ್ರೋ ರೈಲು, ಕೊಂಕಣ ಸೇರಿದಂತೆ ಎಲ್ಲಾ ಪ್ರಯಾಣಿಕ ರೈಲು ಸೇವೆಗಳು ಸ್ಥಗಿತವಾಗಿದೆ. ಇದಲ್ಲದೆ ಉಳಿದ ರೈಲು ಸೇವೆಗಳನ್ನೂ ಸಹ 2020 ರ ಮೇ 3 ರ ವರೆಗೆ ರದ್ದು ಮಾಡಲಾಗಿದೆ.

2. ದೇಶದ ವಿವಿಧ ಭಾಗಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ಖಚಿತಪಡಿಸಿಕೊಳ್ಳಲು, ಸರಕು ಮತ್ತು ಪಾರ್ಸೆಲ್ ರೈಲುಗಳ ಚಾಲನೆ ಮಾತ್ರ ಎಂದಿನಂತೆ ಮುಂದುವರಿಯುತ್ತದೆ.

3. ಎಲ್ಲಾ ಪ್ರಯಾಣಿಕರ ಟಿಕೆಟ್ ಬುಕಿಂಗ್ ರದ್ದತಿ.

4. ದೇಶದ ಎಲ್ಲಾ ರೈಲ್ವೆ ನಿಲ್ದಾಣದ ಆವರಣದ ಹೊರಗೆ ಕಾಯ್ದಿರಿಸಿದ / ಕಾಯ್ದಿರಿಸದ ಪ್ರಯಾಣಕ್ಕಾಗಿ ರೈಲು ಟಿಕೆಟ್ ಕಾಯ್ದಿರಿಸುವ ಎಲ್ಲಾ ಕೌಂಟರ್‌ಗಳು 2020 ರ ಮೇ 3 ರ 2,400 ಗಂಟೆಗಳವರೆಗೆ ಮುಚ್ಚಲ್ಪಟ್ಟಿರುತ್ತವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಭಾರತದಲ್ಲಿ ಕೊರೋನಾ ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದರು. ಆದರೆ, ಲಾಕ್‌ಡೌನ್ ನಡುವೆಯೂ ಪರಿಸ್ಥಿತಿ ಬಿಗಡಾಯಿಸಿದ್ದು ಈ ಅವಧಿಯನ್ನು ಮತ್ತೆ 19 ದಿನಕ್ಕೆ ಏರಿಸಿರುವ ಮೋದಿ ಮೇ 03ರ ವರೆಗೆ ಲಾಕ್‌ಡೌನ್ ಅನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

Comments are closed.