ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 12,380ಕ್ಕೆ ತಲುಪಿದೆ. ಅಲ್ಲದೆ, 414 ಮಂದಿಯನ್ನು ಮಹಾಮಾರಿ ಬಲಿಪಡೆದುಕೊಂಡಿದೆ.
ಮಹಾಮಾರಿಯಿಂದಾಗಿ ದೇಶದಾದ್ಯಂತ ಸುದೀರ್ಘ ಲಾಕ್’ಡೌನ್ ಘೋಷಣೆ ಮಾಡಲಾಗಿದ್ದು, ಇದರ ಪರಿಣಾಮ ದೇಶದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿನ ಕೈಗಾರಿಕಾ ವಲಯಗಳು ನಿಯಮಗಳ ಅನುಸಾರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಈ ನಡುವೆ ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಮಹಾರಾಷ್ಟ್ರದಲ್ಲಿ ಮಹಾಮಾರಿಯ ಆರ್ಭಟ ಜೋರಾಗಿಯೇ ಕಾಣಿಸತೊಡಗಿದೆ. ಮಹಾರಾಷ್ಟ್ರದಲ್ಲಿ ಕೊರೊನವೈರಸ್‍ನ ಹೊಸ 232 ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 2 ಸಾವಿರದ 916ಕ್ಕೇರಿದೆ.
ಸದ್ಯ, ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 2 ಸಾವಿರದ 684 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ ಸೋಂಕಿತ 295 ಮಂದಿ ಗುಣಮುಖರಾಗಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾವನ್ನಪ್ಪಿದ 9 ರೋಗಿಗಳ ಪೈಕಿ ಪುಣೆಯ ಆರು ಮಂದಿ, ಮುಂಬೈನ ಇಬ್ಬರು ಹಾಗೂ ಅಕೋಲದ ಒಬ್ಬರು ಸೇರಿದ್ದಾರೆ ಎಂದು ಟೊಪೆ ಹೇಳಿದ್ದಾರೆ.
ದೇಶಾದ್ಯಂತ ಕೊರೊನಾ ಸೋಂಕು ಪ್ರಕರಣಗಳನ್ನು ಆಧರಿಸಿ, ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಈ ಮೂಲಕ ದೇಶಾದ್ಯಂತ 170 ಜಿಲ್ಲೆಗಳನ್ನು ಹಾಟ್ ಸ್ಪಾಟ್ ಗಳೆಂದೂ ಕೇಂದ್ರ ಗುರ್ತಿಸಿದೆ.
ಹಾಟ್ ಸ್ಪಾಟ್, 207 ಜಿಲ್ಲೆಗಳನ್ನೂ ನಾನ್ ಹಾಟ್ ಸ್ಪಾಟ್ ಮತ್ತು ಗ್ರೀನ್ ಎಂಬುದಾಗಿ ವಿಂಗಡಿಸಲಾಗಿದೆ. ಈ ವಲಯಗಳವಾರು ಮಾರ್ಗ ಸೂಚಿಯಂತೆ ಮಾರ್ಗ ಸೂಚಿಯನ್ನ ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಈ ಕುರಿತು ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಆಯುಕ್ತ ಲವ್ ಅಗರ್ವಾಲ್, ಕೊರೊನಾ ಆಧರಿಸಿ 3 ವಲಯ ವಿಂಗಡಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹಾಟ್ ಸ್ಪಾಟ್, ನಾನ್ ಹಾಟ್ ಸ್ಪಾಟ್, ಗ್ರೀನ್ ವರ್ಗೀಕರಿಸಲಾಗಿದೆ. ಹಾಟ್ ಸ್ಪಾಟ್ ವಲಯದಲ್ಲಿ ಪ್ರತಿ ಮನೆಯನ್ನೂ ತಪಾಸಣೆ ಮಾಡಿ, ಸಮೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇನ್ನೂ ಹಾಟ್ ಸ್ಪಾಟ್ ವಲಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಾನ್ ಹಾಟ್ ಸ್ಪಾರ್ಟ್ ವಲಯಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಇದಕ್ಕಾಗಿಯೇ ಎಲ್ಲಾ ರಾಜ್ಯಗಳಿಗೆ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
Comments are closed.