ರಾಷ್ಟ್ರೀಯ

ಈ ಮನಕಲಕುವ ದೃಶ್ಯ ನೋಡಿ…. ವಾಹನ ಸಿಗದೆ ತಂದೆಯನ್ನು ಹೊತ್ತು ಸಾಗುತ್ತಿರುವ ಮಗ

Pinterest LinkedIn Tumblr

ಕೊಲ್ಲಂ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ವಿಸ್ತರಿಸಲಾಗಿದ್ದು ಕಠಿಣ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸಿಗದೆ ಮಗ ತಂದೆಯನ್ನು ಹೊತ್ತು ಸಾಗುತ್ತಿರುವ ದೃಶ್ಯ ಮನಕಲುಕುವಂತಿದೆ.

ಈ ಘಟನೆ ಕೇರಳದಲ್ಲಿ ನಡೆದಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ 89 ವರ್ಷದ ಜಾರ್ಚ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಅವರನ್ನು ಡಿಸ್ಚಾರ್ಚ್ ಮಾಡಲಾಗಿದ್ದು ತಂದೆಯನ್ನು ಮಗ ರಾಯ್ ಆಟೋರಿಕ್ಷಾದಲ್ಲಿ ಕರೆತರುತ್ತಿದ್ದರು. ಈ ವೇಳೆ ಪೊಲೀಸರು ಆಟೋವನ್ನು ತಡೆದಿದ್ದರಿಂದ ಮಗ ಅವರನ್ನು ಹೊತ್ತು ಮನೆಗೆ ಸಾಗಿದರು.

ಇದನ್ನು ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಾಕ ಜಾಲತಾಣಕ್ಕೆ ಅಪ್ಲೋಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟಿಗರು ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ಪೊಲೀಸರು ತಡೆದು ವಶಕ್ಕೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ದಾಖಲೆ ಇಲ್ಲದ್ದರಿಂದ ಆಟೋರಿಕ್ಷಾವನ್ನು ಪೊಲೀಸರು ತಡೆದು ನಿಲ್ಲಿಸಿದ್ದರು.

Comments are closed.