ಚೆನ್ನೈ: ಕಳೆದ ಭಾನುವಾರ ಸುದ್ದಿವಾಹಿನಿಯ ಉಪ ಸಂಪಾದಕರೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿ ಎರಡು ದಿನಗಳ ಬಳಿಕ ಇದೀಗ ಅವರ 27 ಸಹೋದ್ಯೋಗಿಗಳಲ್ಲಿ ಸಹ ಸೋಂಕು ಕಾಣಿಸಿಕೊಂಡಿದೆ.
ಕಳೆದ ಭಾನುವಾರ ರೊಯಪುರಂನ ಸುದ್ದಿ ವಾಹಿನಿಯ ಉಪ ಸಂಪಾದಕರಿಗೆ ಕೊರೋನಾ ಇರುವುದು ಪತ್ತೆಯಾಗಿತ್ತು. ನಂತರ ಚೆನ್ನೈ ಮಹಾನಗರ ಪಾಲಿಕೆ ಅವರ ಸಂಪರ್ಕಿತ ಕೊರೋನಾ ಶಂಕಿತರಲ್ಲಿ 94 ಮಂದಿಯ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದರು. ಅವರಲ್ಲಿ 27 ಮಂದಿಗೆ ಇಂದು ಸೋಂಕು ತಗುಲಿರುವುದು ದೃಢಪಟ್ಟಿದೆ.
ಇನ್ನು ಕೆಲವರ ರಕ್ತದ ಮಾದರಿಯ ಪರೀಕ್ಷೆ ವರದಿ ಬಂದಿಲ್ಲ. ಇಲ್ಲಿಯವರೆಗೆ ಇಷ್ಟು ಸಿಕ್ಕಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಸೋಂಕು ಕಾಣಿಸಿಕೊಂಡಿದ್ದ ಪತ್ರಕರ್ತ ರೊಯಪುರಂನ ಪೊಲೀಸ್ ಕ್ವಾರ್ಟರ್ಸ್ ನಿವಾಸಿ.
Comments are closed.