ಅಹ್ಮದಾಬಾದ್(ಮೇ 05): ಕೊರೋನಾದಿಂದ ಇಡೀ ಭಾರತವೇ ಕಂಗೆಟ್ಟುಹೋಗಿದೆ. ಬಹುತೇಕ ಮಹಾನಗರಿಗಳಿಗೆ ಕೊರೋನಾ ಮಹಾಮಾರಿಯ ಕರಾಳ ಮುಖದ ದರ್ಶನವಾಗಿದೆ. ಮುಂಬೈ ನಗರಿಯಂತೂ ಅಕ್ಷರಶಃ ಜರ್ಝರಿತವಾಗಿದೆ. ಈಗ ಗುಜರಾತ್ ರಾಜ್ಯದ ಅಹ್ಮದಾಬಾದ್ ನಗರ ಕೂಡ ಅಷ್ಟೇ ಅಪಾಯಕಾರಿಯಾಗಿ ಪರಿಣಿಮಿಸುತ್ತಿದೆ. ಇಲ್ಲಿ ಕೇವಲ 5 ದಿನದಲ್ಲಿ 100 ಮಂದಿ ಸಾವನ್ನಪ್ಪಿರುವುದು ಗುಜರಾತಿಗರನ್ನು ಬೆಚ್ಚಿಬೀಳಿಸಿದೆ. ಚೀನಾದ ವುಹಾನ್ ನಗರಿಯಲ್ಲಿ ಆರಂಭಿಕ ಹಂತದಲ್ಲಾದಂತೆ ಅಹ್ಮದಾಬಾದ್ನಲ್ಲೂ ಕ್ಷಿಪ್ರ ವೇಗದಲ್ಲಿ ಕೊರೋನಾ ಹರಡುತ್ತಿದೆಯಾ ಎಂಬ ಭಯ ಕಾಡುತ್ತಿದೆ.
ಗುಜರಾತ್ ರಾಜ್ಯದಲ್ಲಿ ಈವರೆಗೆ 319 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಅಹ್ಮದಾಬಾದ್ ನಗರವೊಂದರಲ್ಲೇ ಸತ್ತವರ ಸಂಖ್ಯೆ 234 ಇದೆ. ಅಂದರೆ ಗುಜರಾತ್ನ ಶೇ. 73ರಷ್ಟು ಸಾವು ಅಹ್ಮದಾಬಾದ್ನಲ್ಲೇ ಆಗಿದೆ. ಆತಂಕ ವಿಚಾರವೆಂದರೆ ಸೋಂಕು ಬಹಳ ವೇಗವಾಗಿ ಹರಡುತ್ತಿರುವುದು. ಕಳೆದ 10 ದಿನಗಳಲ್ಲಿ ಅಹ್ಮದಾಬಾದ್ನಲ್ಲಿ 160 ಸಾವು ಸಂಭವಿಸಿವೆ. ಅಂದರೆ, ಅಹ್ಮದಾಬಾದ್ನಲ್ಲಿ ಶೇ. 68ರಷ್ಟು ಸಾವು ಕಳೆದ 10 ದಿನಗಳಲ್ಲೇ ಆಗಿದೆ.
ಏಪ್ರಿಲ್ 25ರಿಂದ ಮೇ 4ರವರೆಗೆ ಪ್ರತೀ ದಿನ ಅಹ್ಮದಾಬಾದ್ನಲ್ಲಿ ಸಂಭವಿಸಿದ ಸಾವಿನ ಸಂಖ್ಯೆ ಇಲ್ಲಿದೆ:
ಏಪ್ರಿಲ್ 25: 4
ಏಪ್ರಿಲ್ 26: 18
ಏಪ್ರಿಲ್ 27: 5ಏಪ್ರಿಲ್ 28: 19
ಏಪ್ರಿಲ್ 29: 14
ಏಪ್ರಿಲ್ 30: 15
ಮೇ 01: 16
ಮೇ 02: 20
ಮೇ 03: 23
ಮೇ 04: 26
ಅಹ್ಮದಾಬಾದ್ನಲ್ಲಿ ಒಟ್ಟು 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲ್ಲಿ ಹಲವು ಹಾಟ್ಸ್ಪಾಟ್ಗಳನ್ನ ಗುರುತಿಸಿ ಕಂಟೈನ್ಮೆಂಟ್ ಜೋನ್ ಆಗಿ ಪರಿಗಣಿಸಲಾಗಿದೆ. ಇಲ್ಲಿ ಖಾಸಗಿ ಆಸ್ಪತ್ರೆಗಳನ್ನೂ ಕೋವಿಡ್ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತಿದೆ.
Comments are closed.