ಭಾನುವಾರದಂದು ಗ್ರೂಪ್ ಚಾಟ್‌ನಲ್ಲಿ ಬಾಲಕಿಯ ಅತ್ಯಾಚಾರದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಚರ್ಚಿಸಿದ ವಿಷಯಗಳು ಲೀಕ್ ಆಗಿದ್ದವು. ಇದು ಭಾರಿ ವಿವಾದ ಸೃಷ್ಟಿಯಾಗಲು ಕಾರಣವಾಗಿತ್ತು. ಈಗ ಪ್ರಕರಣ ಕೈಗೆತ್ತಿಗೊಂಡಿರುವ ದಿಲ್ಲಿ ಪೋಲಿಸ್‌ನ ಸೈಬರ್ ವಿಭಾಗವು ತನಿಖೆ ನಡೆಸುತ್ತಿದ್ದಾರೆ.
‘ಬಾಯ್ಸ್ ಲಾಕ್ ರೂಮ್’ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಸಿಕ್ರೇಟ್ ಗ್ರೂಪ್‌ನಲ್ಲಿ ಚರ್ಚೆ ನಡೆಸಲಾಗಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರಸ್ತುತ ಗ್ರೂಪ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ದಿಲ್ಲಿಯ ಹೆಸರಾಂತ ಶಾಲೆಯ 20ಕ್ಕೂ ಹೆಚ್ಚು ಹುಡುಗರು ಗ್ರೂಪ್‌ನಲ್ಲಿದ್ದರು ಎನ್ನಲಾಗಿದೆ. ಬಾಲಕನ ಮೊಬೈಲ್ ಫೋನ್ ವಶಪಡಿಸಿರುವ ದಿಲ್ಲಿ ಪೊಲೀಸ್ ಸೈಬರ್ ಸೆಲ್ ವಿಭಾಗವು ಸೀಜ್ ಮಾಡಿದೆ.
ದಕ್ಷಿಣ ದಿಲ್ಲಿಯ 11 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳು ಉದ್ರೇಕಕಾರಿ ಚಾಟಿಂಗ್‌ನಲ್ಲಿ ಭಾಗಿಯಾಗುತ್ತಿರುವುದು ಅಪಾಯಕಾರಿಯೆನಿಸಿದೆ. ಗ್ರೂಪ್ ಚಾಟ್‌ನಲ್ಲಿ ಅತ್ಯಾಚಾರ, ಲೈಂಗಿಕತೆ ಬಗ್ಗೆ ಚರ್ಚಿಸುತ್ತಿದ್ದು, ಕ್ರಿಮಿನಲ್ ಮನೋಭಾವನೆ ಹೊಂದಿರುವುದು ಪೋಷಕ ಹಾಗೂ ಪೊಲೀಸರ ಪಾಲಿಗೆ ಸವಾಲಿನ ವಿಷಯವಾಗಿ ಪರಿಣಮಿಸಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದರ ಸಲುವಾಗಿ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಂಗೆ ದಿಲ್ಲಿ ಪೊಲೀಸ್ ಸೈಬರ್ ವಿಭಾಗವು ಪತ್ರ ಬರೆದಿದೆ.
ಭಾನುವಾರದಂದು ಹಲವಾರು ಸೋಷಿಯಲ್ ಮೀಡಿಯಾ ಬಳಕೆದಾರರು, ಬಾಯ್ಸ್ ಲಾಕ್ ರೂಮ್ ಚಾಟಿಂಗ್ ಸ್ಕ್ರೀನ್‌ಶಾಟ್‌ಗಳನ್ನು ಹಂಚಿದ್ದರು. ಇದು ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
Comments are closed.