ರಾಷ್ಟ್ರೀಯ

ಗುಜರಾತ್​​: 7 ಸಾವಿರ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ, 425 ಸಾವು

Pinterest LinkedIn Tumblr


ನವದೆಹಲಿ(ಮೇ.07): ಗುಜರಾತ್​​ನಲ್ಲೂ ಮಾರಕ ಕೊರೋನಾ ವೈರಸ್ ಸೋಂಕು ತಗುಲಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 388 ಪ್ರಕರಣ ವರದಿಯಾಗಿದೆ. ಇದರ ಪರಿಣಾಮ ಕೊರೋನಾ ಸೋಂಕು ಪೀಡಿತರ ಸಂಖ್ಯೆ 7,013ಕ್ಕೆ ಏರಿಕೆಯಾಗಿದ್ದು, ಸತ್ತವರ ಸಂಖ್ಯೆ 425ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದೆ.

ಕೊರೋನಾ ಸೋಂಕು ಹರಡುವಿಕೆಯನ್ನು ಕೊನೆಗಾಣಿಸಬೇಕೆಂದು ಒಂದಲ್ಲ, ಎರಡಲ್ಲ ಮೂರು ಸಲ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಆದರೆ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುವ ಬದಲಿಗೆ ಏರುಮುಖವಾಗಿ ಸಾಗಿದೆ. ಈ ನಡುವೆ ಕೇವಲ ನಾಲ್ಕೇ ದಿನದಲ್ಲಿ ದೇಶಾದ್ಯಂತ 10 ಸಾವಿರ ಪ್ರಕರಣಗಳು ಪತ್ತೆಯಾಗಿ ಆತಂಕ ಮೂಡಿಸಿವೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಅಧಿಕೃತ ಮಾಹಿತಿಗಳ ಪ್ರಕಾರ ದೇಶದಲ್ಲಿ ಕಳೆದ 4 ದಿನಗಳಲ್ಲಿ ದೇಶಾದ್ಯಂತ 10 ಸಾವಿರ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ಇದರಿಂದಾಗಿ ಜಗತ್ತಿನಾದ್ಯಂತ ಕೊರೋನಾ ಸೋಂಕು ಹರಡಿವಿಕೆಯಲ್ಲಿ ಭಾರತ 14ನೇ ಸ್ಥಾನಕ್ಕೆ ಜಿಗಿದಿದೆ. ಶೀಘ್ರವೇ 13 ಸ್ಥಾನಕ್ಕೆ ಏರುವ ಸಾಧ್ಯತೆ ಕೂಡ ಇದೆ. ಏಕೆಂದರೆ ಭಾರತ ಮತ್ತು 13 ಸ್ಥಾನದಲ್ಲಿರುವ ಪೆರು ದೇಶದ ನಡುವೆ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಇರುವ ವ್ಯತ್ಯಾಸ 1,412 ಮಾತ್ರ. ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಿರುವ ಸೋಂಕು ಪೀಡಿತರ ಸಂಖ್ಯೆ ಭಾರತದಲ್ಲಿ 53,405, ಪೆರು ದೇಶದಲ್ಲಿ 54,817 ಇದೆ.

ಹೀಗೆ ದೇಶದಲ್ಲಿ ವ್ಯಾಪಕವಾಗಿ ಕೊರೋನಾ ಸೋಂಕು ಹರಡುತ್ತಿರುವುದು 7 ರಾಜ್ಯಗಳಲ್ಲಿ ಎಂಬುದು ಕೂಡ ಕೇಂದ್ರ ಆರೊಗ್ಯ ಇಲಾಖೆ ಮಾಹಿತಿಯಿಂದ ದೃಢಪಡುತ್ತದೆ. ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ 3 ಸಾವಿರಕ್ಕಿಂತಲೂ‌ ಹೆಚ್ಚು ಜನ‌‌‌ ಕೊರೋನಾ ಪೀಡಿತರಿದ್ದಾರೆ. ಇಡೀ ದೇಶಾದ್ಯಂತ 53,405 ಜನ‌ ಕೊರೋನಾ ಪೀಡಿತರಿದ್ದರೆ ಈ 7 ರಾಜ್ಯಗಳಲ್ಲೇ 43,000 ಕೊರೋನಾ ಪೀಡಿತರಿದ್ದಾರೆ. ಅಂದರೆ ಒಟ್ಟಾರೆ ಕೊರೋನಾ ಸೋಂಕು ಪೀಡಿತರ ಸಂಖ್ಯೆಯ ಶೇಕಡಾ 80ರಷ್ಟು ಕೊರೋನಾ ಪೀಡಿತರು ಈ 7 ರಾಜ್ಯಗಳಲ್ಲೇ ಇದ್ದಾರೆ.ದೇಶದಲ್ಲಿ ಮೊದಲ ಕೊರೋನಾ ಸೋಂಕು ಕಾಣಿಸಿಕೊಂಡಿದ್ದ ಕೇರಳದಲ್ಲಿ ಮತ್ತು ದೇಶದಲ್ಲೇ ಕೊರೋನಾಗೆ ಮೊದಲ ವ್ಯಕ್ತಿ ಬಲಿಯಾದ ಕರ್ನಾಟಕದಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. ಕೇರಳ ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಒಂದೂ ಪ್ರಕರಣ ಪತ್ತೆಯಾಗಿಲ್ಲ. ಈ ದೃಷ್ಟಿಯಲ್ಲಿ ಕೇರಳ ಈಗ ಇಡೀ ದೇಶಕ್ಕೆ ಮಾದರಿಯಾಗಿದೆ.

Comments are closed.