ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾವೈರಸ್ (Coronavirus) ಪ್ರಕರಣಗಳು ಹೆಚ್ಚಾಗುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಳವಳವನ್ನು ಹೆಚ್ಚಿಸಿದೆ. ಏತನ್ಮಧ್ಯೆ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದು ನಾವು ಕರೋನಾದೊಂದಿಗೆ ಬದುಕಲು ಕಲಿಯಬೇಕಾಗಿದೆ ಎಂದಿದ್ದಾರೆ.
ಕರೋನಾ ಪ್ರಕರಣಗಳು ದೆಹಲಿಯಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿವೆ ಎಂದು ಸತ್ಯೇಂದ್ರ ಜೈನ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು. ಕರೋನಾದ ವೈರಸ್ ಕೋವಿಡ್-19 (Covid-19) ಯಾವುದೇ ಎರಡು ಅಥವಾ ಮೂರು ತಿಂಗಳುಗಳಲ್ಲಿ ಗುಣಪಡಿಸಬಹುದಾದ ಸಾಮಾನ್ಯ ವೈರಸ್ ಅಲ್ಲ ಎಂದು ಅರ್ಥಮಾಡಿಕೊಳ್ಳಬೇಕು, ಅದು ಜಗತ್ತಿನಲ್ಲಿ ದೀರ್ಘಕಾಲ ಬದುಕಲಿದೆ. ಇದರೊಂದಿಗೆ ನಾವು ಒಟ್ಟಾಗಿ ಬದುಕುವ ವಿಧಾನಗಳನ್ನು ಕಲಿಯಬೇಕಾಗಿದೆ ಎಂದು ಹೇಳಿದರು.
ಮೇ 10ರಂದು ರಾತ್ರಿ 10 ಗಂಟೆವರೆಗೆ ದೆಹಲಿಯಲ್ಲಿ 310 ಹೊಸ COVID-19 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ ರೋಗ್ಯ ಸಚಿವ ಸತ್ಯೇಂದ್ರ ಜೈನ್ ರಾಜಧಾನಿಯಲ್ಲಿ ಒಟ್ಟು ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಈಗ 7233 ಕ್ಕೆ ಏರಿದೆ. ದೈನಂದಿನ ಸಾವಿನ ಅಂಕಿಅಂಶಗಳೊಂದಿಗೆ ವರದಿಯನ್ನು ಸಲ್ಲಿಸುವಂತೆ ನಾವು ಎಲ್ಲಾ ಆಸ್ಪತ್ರೆಗಳಿಗೆ ಆದೇಶಿಸಿದ್ದೇವೆ ಎಂದರು.
ಕರೋನಾ ಸೋಂಕಿನ ಟಾಪ್ 5 ರಾಜ್ಯಗಳು ಇವು:
1. ಮಹಾರಾಷ್ಟ್ರದಲ್ಲಿ 22,171 ಕೊರೋನಾ ಪೀಡಿತರು, 832 ಮಂದಿ ಸಾವನ್ನಪ್ಪಿದ್ದಾರೆ.
2. ಗುಜರಾತ್‌ನಲ್ಲಿ 8194 ಕೋವಿಡ್ ರೋಗಿಗಳಿದ್ದು, 493 ಮಂದಿ ಮೃತಪಟ್ಟಿದ್ದಾರೆ.
3. ತಮಿಳುನಾಡಿನಲ್ಲಿ 7204 ಕೊರೋನಾ ರೋಗಿಗಳಿದ್ದು 47 ಮಂದಿ ಮೃತಪಟ್ಟಿದ್ದಾರೆ.
4. ದೆಹಲಿಯಲ್ಲಿ 7233 ಕೊರೋನಾ ಪೀಡಿತರಿದ್ದು 73 ಮಂದಿ ಸಾವನ್ನಪ್ಪಿದ್ದಾರೆ.
5. ರಾಜಸ್ಥಾನದಲ್ಲಿ 3814 ಕೊರೋನಾ ಪೀಡಿತರಾಗಿದ್ದು ಇವರಲ್ಲಿ 107 ಮಂದಿ ಮೃತಪಟ್ಟಿದ್ದಾರೆ.
ಭಾರತದಲ್ಲಿ ಕರೋನಾ ಬೆದರಿಸುವ ಅಂಕಿ ಅಂಶಗಳು!
– 24 ಗಂಟೆಗಳಲ್ಲಿ ಗರಿಷ್ಠ ಹೊಸ ಪ್ರಕರಣಗಳು
– 24 ಗಂಟೆಗಳಲ್ಲಿ 4213 ಜನರಲ್ಲಿ ಕರೋನಾ ಧನಾತ್ಮಕ
– 24 ಗಂಟೆಗಳಲ್ಲಿ 97 ಜನರು ಸಾವನ್ನಪ್ಪಿದ್ದಾರೆ
– ಒಟ್ಟು 2206 ಜನರು ಸಾವನ್ನಪ್ಪಿದ್ದಾರೆ.
– ದೇಶದಲ್ಲಿ ಒಟ್ಟು ಕೊರೋನಾ ಪೀಡಿತರ ಸಂಖ್ಯೆ 67152ಕ್ಕೆ ಏರಿಕೆ.
Comments are closed.