ರಾಷ್ಟ್ರೀಯ

ಮೇ 17ರ ಬಳಿಕವೂ ಇರಲಿದೆ ಲಾಕ್​ಡೌನ್

Pinterest LinkedIn Tumblr

Lockdown Extension: ಮೇ 17ರ ಬಳಿಕವೂ ಇರಲಿದೆ ಲಾಕ್​ಡೌನ್, ಆದರೆ ವಿನಾಯಿತಿಗಳೂ‌ ಉಂಟು

ನವದೆಹಲಿ(ಮೇ 11): ಕಂಡುಕೇಳರಿಯದ ಕೊರೋನಾ ಮತ್ತು ಅದನ್ನು ನಿಯಂತ್ರಿಸಲು ತಂದ ಲಾಕ್​ಡೌನ್ ವಿಷಯಗಳ ಬಗ್ಗೆ ವಿಷದವಾಗಿ ಚರ್ಚಿಸಲು ಇಂದು ಕರೆಯಲಾಗಿದ್ದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಎರಡು ಮಹತ್ವದ ಸುಳಿವು ನೀಡಿದ್ದಾರೆ. ಒಂದು ಮೇ 17ರ ಬಳಿಕವೂ ಲಾಕ್​ಡೌನ್ ಮುಂದುವರೆಯಲಿದೆ ಎಂಬದು. ಇನ್ನೊಂದು, ಲಾಕ್​ಡೌನ್ ಜಾರಿಯಲ್ಲಿದ್ದರೂ ಅಗತ್ಯ ವಿನಾಯಿತಿಗಳು ಕೂಡ ಇರಲಿವೆ ಎಂಬುದು.

ಸಭೆ ಆರಂಭವಾದಾಗ ಪ್ರಾಸ್ತಾವಿಕ ಭಾಷಣ ಮಾಡಿದಾಗ ಕೊರೊನಾ ಸೋಂಕು ಗ್ರಾಮೀಣ ಪ್ರದೇಶಕ್ಕೆ ಹರಡದಂತೆ ನೋಡಿಕೊಳ್ಳಿ ಎಂದು ರಾಜ್ಯಗಳಿಗೆ ಕರೆಕೊಟ್ಟಿದ್ದರು. ಈ ಹೇಳಿಕೆ ಮೂಲಕ ಕೊರೊನಾ ಸೋಂಕು ಈಗ ನಗರ ಪ್ರದೇಶಗಳಲ್ಲಿದೆ.‌ ಗ್ರಾಮೀಣ ಭಾಗಕ್ಕೂ‌ ಹರಡಿದರೆ ಕಮ್ಯುನಿಟಿ ಸ್ಪ್ರೆಡ್ ಆದಂತಾಗುತ್ತದೆ. ಆಗ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟ ಎಂದಿದ್ದರು.

ಅಲ್ಲದೆ ಮೇ 17ರ ಬಳಿಕ ಕೆಲ ನಿರ್ದಿಷ್ಟ ಮಾರ್ಗಗಳಲ್ಲಿ ರೈಲು ಸಂಚಾರ ಮತ್ತು ವಿಮಾನ ಸಂಚಾರ ಪ್ರಾರಂಭಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರಗಳು ನೀಡುವ ಸಲಹೆಗಳ ಆಧಾರದ ಮೇಲೆ ಲಾಕ್ ಡೌನ್ ಸಡಿಲಿಕೆ ಬಗ್ಗೆ ಮಾರ್ಗಸೂಚಿ ಪ್ರಕಟಿಸುವುದಾಗಿ ಹೇಳಿದ್ದರು. ಈ ಮುಖಾಂತರ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಲಾಕ್​ಡೌನ್ ತೆರವುಗೊಳಿಸಲಾಗುವುದು ಎಂಬ ಸುಳಿವು ನೀಡಿದ್ದರು. ಸಭೆ ಮುಕ್ತಾಯವಾಗುವ ಮುನ್ನ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯಗಳು ಈಗಾಗಲೇ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ಲಾಕ್​ಡೌನ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ವಿಷಯದ ಕುರಿತಾಗಿ ಸಲಹೆಗಳನ್ನು ನೀಡಿದ್ದೀರಿ.‌ ಇನ್ನೂ ಏನಾದರೂ ಸಲಹೆ ಇದ್ದರೆ ಮೇ 15ರೊಳಗೆ ಕಳುಹಿಸಿಕೊಡಿ.‌ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಚಟುವಟಿಕೆ ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಚಿಸುತ್ತದೆ. ಜನರ ಉತ್ಸಾಹದಿಂದಾಗಿ ನಾವು ಈ ಹೋರಾಟವನ್ನು ಗೆಲ್ಲಬೇಕಿದೆ ಎಂದು ಹೇಳಿದರು.

ಕರೋನಾದ ನಂತರ ಹೊಸ ಜೀವನಶೈಲಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಆ ಮೂಲಕ ಆರ್ಥಿಕ ಬೆಳವಣಿಗೆ ಸಾಧಿಸುವ ಸಾಮರ್ಥ್ಯ ದೇಶಕ್ಕೆ ಇದೆ. ಮುಂದೆ ತಂತ್ರಜ್ಞಾನ ಬಳಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಲಾಕ್​ಡೌನ್ ವಿಸ್ತರಣೆ ಮಾಡುವ ಬಗ್ಗೆ ಮತ್ತು ಮೊಟಕುಗೊಳಿಸುವ ಬಗ್ಗೆ ಕೆಲವು ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವರು ಪರವಾದ ನಿಲುವು ವ್ಯಕ್ತಪಡಿಸಿದ್ದಾರೆ. ನಾಳೆಯಿಂದ ಪ್ರಯಾಣಿಕರ ರೈಲು ಪ್ರಯಾಣ ಆರಂಭಿಸುವ ಬಗ್ಗೆ ಮತ್ತು ಅಂತಾರಾಜ್ಯ ಸಂಪರ್ಕ ಶುರು ಮಾಡುವ ಬಗ್ಗೆ ಕೂಡ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಕೊರೊನಾ ಪರಿಸ್ಥಿತಿ ನಿರ್ವಹಿಸಲು ಕೂಡಲೇ ರಾಜ್ಯಗಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಹೇಳಿದ್ದಾರೆ. ಇವೆಲ್ಲವುಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಅಂತಿಮ‌ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಕೊರೋನಾ ಕಷ್ಟ ದೇಶಕ್ಕೆ ವಕ್ಕರಿಸಿದ ಬಳಿಕ‌ ಐದನೇ ಬಾರಿಗೆ ಪ್ರಧಾನಿ ಮೋದಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದರು. ಇದಕ್ಕೂ ಮೊದಲ ನಡೆದ ಸಭೆಗಳಲ್ಲಿ ಎಲ್ಲಾ ಮುಖ್ಯಮಂತ್ರಿಗಳಿಗೂ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ.‌ ಆದರೆ ಈ ಬಾರಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು

Comments are closed.