ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ರಾತ್ರಿ 8 ಗಂಟೆಗೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
3ನೇ ಹಂತದ ಲಾಕ್ ಡೌನ್ ಇದೇ ಭಾನುವಾರ ಮೇ 17ರಂದು ಕೊನೆಗೊಳ್ಳಲಿದ್ದು ಅದರ ಸಡಿಲಿಕೆ ಕಾರ್ಯತಂತ್ರ ಬಗ್ಗೆ ಮತ್ತು ಕೊರೋನಾ ನಿಯಂತ್ರಣ ಬಗ್ಗೆ ನಿನ್ನೆ ಪ್ರಧಾನಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಸಂವಾದ ನಡೆಸಿದ್ದರು.
ಅದರಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದಿದ್ದವು. ಈ ನಿಟ್ಟಿನಲ್ಲಿ ಇಂದು ಮೋದಿಯವರು ಮಾಡುತ್ತಿರುವ ಭಾಷಣ ಮಹತ್ವದ್ದಾಗಿದ್ದು ಲಾಕ್ ಡೌನ್ ಸಡಿಲಿಕೆ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
Comments are closed.