ಹೈದರಾಬಾದ್: ಮದ್ಯ ವ್ಯಸನಿ ವ್ಯಕ್ತಿಯ ಜಗಳದಿಂದ ಬೇಸತ್ತ ಪತ್ನಿ, ಪುತ್ರ ಆತನನ್ನು ಕೊಲೆ ಮಾಡಿರುವ ಘಟನೆ ನಾಗರ್ ಕರ್ನೂಲ್ ಜಿಲ್ಲೆಯ ಮಂಗನೂರು ಗ್ರಾಮದಲ್ಲಿ ನಡೆದಿದೆ. ಕೊಲೆಯಾದವನನ್ನು ಕಾರ್ಮಿಕ ಜಿ. ಶ್ರೀನಿವಾಸ್ ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಎಚ್ಚರಿಕೆ ನೀಡಿದ ನಂತರ ಮೃತನ ಪತ್ನಿ ಲಕ್ಷಮ್ಮ, ಮಗ ಈಶ್ವರ್ ಮತ್ತು ಸೋದರಳಿಯ ಶಿವ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ನಾಗರ್‌ಕರ್ನೂಲ್ ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸ್ ಹೆಂಡತಿ, ಮಗನೊಂದಿಗೆ ನಿತ್ಯ ಜಗಳವಾಡುತ್ತಿದ್ದರು ಹಾಗೂ ಹಿಂಸೆ ಕೊಡುತ್ತಿದ್ದ ಕಾರಣ ಕೊಲೆ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಶ್ರೀನಿವಾಸ್ ಹಾಗೂ ಪತ್ನಿ ಜಗಳವಾಡುತ್ತಿದ್ದಾಗ ಕೋಪದಲ್ಲಿ ಪುತ್ರ ಈಶ್ವರ್ ತಂದೆಯ ಕತ್ತು ಕೊಯ್ದಿದ್ದಾನೆ. ಆ ವೇಳೆ ಪತ್ನಿ ಹಾಗೂ ಸೋದರಳಿಯ ಶಿವ ಶ್ರೀನಿವಾಸ್‌ನನ್ನು ಹಿಡಿದುಕೊಂಡಿದ್ದರು. ನಂತರ ತಂದೆಯ ದೇಹದಿಂದ ಬರುತ್ತಿದ್ದ ರಕ್ತವನ್ನು ನೋಡಿ ಪುತ್ರ ಗಾಬರಿಯಾಗಿದ್ದಾನೆ. ಆದರೆ, ಲಕ್ಷ್ಮಮ್ಮ ಮತ್ತೊಮ್ಮೆ ಚಾಕುವಿನಿಂದ ಪತಿಯ ಕತ್ತು ಕೊಯ್ದಿದ್ದಾರೆ. ಬಳಿಕ ಶ್ರೀನಿವಾಸ್ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಘಟನೆಯನ್ನು ವಿವರಿಸಿದ್ದಾರೆ.
ಈ ಘಟನೆ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಸ್ಥಳೀಯ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
Comments are closed.