ರಾಷ್ಟ್ರೀಯ

ಠಾಣೆಯಲ್ಲಿ ಹೆಂಡತಿಯೊಂದಿಗೆ ಗಲಾಟೆ – ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್

Pinterest LinkedIn Tumblr


ಗಾಂಧಿನಗರ: ಪತ್ನಿ ಜೊತೆಗೆ ಜಗಳವಾಡಿಕೊಂಡು ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ಖೇಡಾದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಪೇದೆಯನ್ನು 39 ವರ್ಷದ ದಿವಂತ್ ಪರ್ಮಾರ್ ಎಂದು ಗುರುತಿಲಾಗಿದೆ. ಕೌಟುಂಬಿಕ ಕಾರಣದಿಂದ ಗಂಡ ಹೆಂಡತಿ ಜಗಳವಾಡಿಕೊಂಡಿದ್ದಾರೆ. ಇದು ವಿಕೋಪಕ್ಕೆ ಹೋಗಿ ಪತ್ನಿ ಪೊಲೀಸ್ ಗಂಡನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮನೆಯಲ್ಲಿ ಯಾವುದೋ ಸಣ್ಣ ವಿಚಾರಕ್ಕೆ ಶುರುವಾದ ದಂಪತಿಯ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ವೇಳೆ ಗಂಡ ಹೆಂಡತಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ಪೊಲೀಸರ ಮುಂದೆಯೇ ದಿವಂತ್ ಅವರ ಪತ್ನಿ ಜಗಳ ಮಾಡಿದ್ದಾರೆ. ಇದರಿಂದ ಅವಮಾನಗೊಂಡ ದಿವಂತ್ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸ್ ಹಾಗೂ ಪತ್ನಿಗೆ ಹೇಳಿ ಅಲ್ಲಿಂದ ಹೊರಬಂದಿದ್ದಾರೆ.

ಕೋಪದಲ್ಲಿ ಹೊರಬಂದ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಜಗಳದ ನಂತರ ನೇರವಾಗಿ ಮನೆಗೆ ವಾಪಸ್ ಬಂದ ಪೇದೆ ದಿವಂತ್ ಪರ್ಮಾರ್ ನೇರವಾಗಿ ತನ್ನ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರನ್ನು ಹಿಂಬಾಲಿಸಿ ಅವರ ಠಾಣೆಯ ಪೊಲೀಸರು ಬಂದಿದ್ದಾರೆ ಆದರೆ ಆತನ್ನನ್ನು ಕಾಪಾಡಲು ಆಗಿಲ್ಲ.

ಇದೇ ರೀತಿಯ ಘಟನೆ ದೆಹಲಿಯಲ್ಲಿ ಮೇ 5ರಂದು ನಡೆದಿದ್ದು, ದೆಹಲಿಯ ಪೇದೆಯೊಬ್ಬರು ತನ್ನ ಪತ್ನಿಯನ್ನು ಶೂಟ್ ಮಾಡಿ ಕೊಲೆ ಮಾಡಿದ್ದರು. ಅವರ ಪತ್ನಿ ಕೂಡ ಪೊಲೀಸ್ ಆಗಿದ್ದು, ಕೊರೊನಾ ಶೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಪತ್ನಿಯನ್ನು ಶೂಟ್ ಮಾಡಿದ್ದ ಪೇದೆ ನಂತರ ಒಂದು ದಿನದ ಬಳಿಕ ತನ್ನನ್ನು ತಾನೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

Comments are closed.