ರಾಷ್ಟ್ರೀಯ

250 ಕಿ.ಮೀ ದೂರದಲ್ಲಿರುವ ತವರೂರಿಗೆ ತೆರಳಲು ಸೈಕಲ್‌ ಕದ್ದ ವಲಸೆ ಕಾರ್ಮಿಕ; ಕದಿಯುವಾಗ ಬರೆದ ಹೃದಯಸ್ಪರ್ಶಿ ತಪ್ಪೊಪ್ಪೊಗೆ ಪತ್ರ ಓದಿ ಕಣ್ಣೀರಿಟ್ಟ ಸೈಕಲ್ ಮಾಲಿಕ

Pinterest LinkedIn Tumblr

ಜೈಪುರ: ದೇಶದಲ್ಲಿ ಏಕಾಏಕಿ ಲಾಕ್‌ಡೌನ್‌ ಜಾರಿಯಗಿದ್ದರಿಂದ ಜನರು ಎಲ್ಲಿದ್ದರೋ ಅಲ್ಲೆ ಉಳಿಯುವಂತಾಯ್ತು. ಈ ಪೈಕಿ ತುಂಬಾನೇ ಕಷ್ಟಪಟ್ಟಿದ್ದು ಬೇರೆ ಊರಿಗೆ ಕೆಲಸಕ್ಕೆ ಹೋದ ವಲಸೆ ಕಾರ್ಮಿಕರು. ಇದೀಗ ವಲಸೆ ಕಾರ್ಮಿಕನೊಬ್ಬ 250 ಕಿ.ಮೀ ದೂರದಲ್ಲಿರುವ ತವರೂರಿಗೆ ತೆರಳಲು ಸೈಕಲ್‌ ಕದ್ದಿದ್ದಾನೆ.

ಆದ್ರೆ ಆತ ಸುದ್ದಿಯಾಗಿದ್ದು ಸೈಕಲ್‌ ಕದ್ದಿದಕ್ಕೆ ಮಾತ್ರವಲ್ಲ. ಆತ ಬರೆದ ಹೃದಯಸ್ಪರ್ಶಿ ತಪ್ಪೊಪ್ಪೊಗೆ ಪತ್ರದಿಂದಾಗಿ. ಸೈಕಲ್‌ ಕದ್ದ ನಂತರ ಕ್ಷಮಿಸಿ ಬಿಡಿ ಅನ್ನುವ ಭಾವನಾತ್ಮಕ ಪತ್ರವನ್ನ ಮಾಲೀಕನಿಗಾಗಿ ಕಾರ್ಮಿಕ ಬರೆದಿದ್ದಾನೆ. ಮೊಹಮ್ಮದ್‌ ಇಕ್ಬಾಲ್‌ ಎಂಬಾತ ರಾಜಸ್ತಾನದ ಭರತ್‌ಪುರ್‌ನಲ್ಲಿ ಕೆಲಸಕ್ಕೆಂದು ತೆರಳಿದ್ದ.

ಆದ್ರೆ ಲಾಕ್‌ಡೌನ್‌ ಹಿನ್ನೆಲೆ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆದ್ರೆ ಮನೆಗೆ ಸೇರುವ ಅವಶ್ಯಕತೆ ಇಕ್ಬಾಲ್‌ಗಿತ್ತು. ಹೀಗಾಗಿ 250 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಗೆ ತೆರಳಲು ಏನಾದರೂ ವಾಹನ ಬೇಕು ಅಂತ ಯೋಚಿಸುತ್ತಾನೆ. ಆದ್ರೆ ಅವನ ಮುಂದೆ ಬೇರೆ ಯಾವುದೇ ಆಯ್ಕೆ ಕಾಣುವುದಿಲ್ಲ. ಹೀಗಾಗಿ ತಪ್ಪು ಅಂತ ಗೊತ್ತಿದ್ದರೂ ಅದೇ ಊರಿನಲ್ಲಿದ್ದ ಸೈಕಲೊಂದನ್ನ ರಾತ್ರಿ ಹೊತ್ತು ಕದ್ದುಕೊಂಡು ಹೋಗಿದ್ದಾನೆ.

ಹೋಗುವ ವೇಳೆ ಸೈಕಲ್‌ ಒಡೆಯನ ಮನೆಯ ಮುಂದೆ ಪತ್ರ ಕೂಡ ಬರೆದು ಇಟ್ಟು ಹೋಗಿದ್ದಾನೆ. ಮನೆ ಕ್ಲೀನ್‌ ಮಾಡೋ ಸಂದರ್ಭದಲ್ಲಿ ಮಾಲೀಕನಿಗೆ ಪತ್ರ ಸಿಕ್ಕಿದೆ. ಪತ್ರ ಓದಿದ ಮಾಲೀಕ ಕಣ್ಣೀರು ಹಾಕಿದ್ದಾನೆ. ಈ ಪತ್ರದಲ್ಲಿ ತಾನೊಬ್ಬ ಕಾರ್ಮಿಕನಾಗಿದ್ದು.ಅಸಹಾಯಕನಾಗಿದ್ದಾನೆ. ಅಲ್ಲದೇ ನಾನು ನಿಮ್ಮ ಮುಂದೆ ಅಪರಾಧಿ ಕೂಡ ಹೌದು. ನಾನು ನಿಮ್ಮ ಸೈಕಲ್‌ ತೆಗೆದುಕೊಂಡು ಹೋಗುತಿದ್ದೇನೆ. ಯಾಕೆಂದ್ರೆ ನನ್ನ ಮುಂದೆ ಯಾವುದೇ ಆಯ್ಕೆಗಳಿಲ್ಲ. ಹೀಗಾಗಿ ನನಗೆ ಕ್ಷಮೆ ನೀಡಿ. ನನಗೆ ಬರೇಲಿವರೆಗೆ ತೆರಳಬೇಕು ಎಂದು ಹೇಳಿಕೊಂಡಿದ್ದಾನೆ.

Comments are closed.