ತಿರುವನಂತಪುರಂ: ಶನಿವಾರ ಕೇರಳದಲ್ಲಿ 11 ಜನರಿಗೆ ಕೋವಿಡ್ -19 ತಗುಲಿರುವುದಾಗಿ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದ್ದಾರೆ.
ತ್ರಿಶೂರ್ ಜಿಲ್ಲೆಯಲ್ಲಿ ನಾಲ್ವರಿಗೆ, ಕೋಳಿಕೋಡ್ ಜಿಲ್ಲೆಯಿಂದ ಮೂವರಿಗೆ, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ಇಬ್ಬರಿಗೆ ರೋಗ ದೃಢಪಟ್ಟಿದೆ. ಈ ಪೈಕಿ 11 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಈ ಪೈಕಿ ಏಳು ಮಂದಿ ವಿದೇಶಗಳಿಂದ ಮತ್ತು ತಲಾ 2 ತಮಿಳುನಾಡು ಮತ್ತು ಮಹಾರಾಷ್ಟದಿಂದ ಬಂದವರು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಚಿಕಿತ್ಸೆಯಲ್ಲಿದ್ದ 4 ಜನರ ತಪಾಸಣಾ ಫಲಿತಾಂಶ ಪಾಸಿಟಿವ್ ಬಂದಿದೆ. ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಲಾ ಇಬ್ಬರ ತಪಾಸಣೆಯ ಫಲಿತಾಂಶಗಳು ನೆಗೆಟಿವ್ ಬಂದಿವೆ. ಈವರೆಗೆ 87 ಜನರಿಗೆ ಈ ರೋಗ ದೃಢಪಟ್ಟಿದ್ದು, ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 497 ಜನರು ಕೋವಿಡ್-19ನಿಂದ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಈವರೆಗೆ ವಿಮಾನ ನಿಲ್ದಾಣದ ಮೂಲಕ 2,911 ಜನರು, ಬಂದರು ಮೂಲಕ 793 ಜನರು, ಚೆಕ್ ಪೋಸ್ಟ್ ಮೂಲಕ 50,320 ಜನ ಮತ್ತು ರೈಲು ಮೂಲಕ 1,021 ಜನರು ಸೇರಿ ಒಟ್ಟು 55,045 ಮಂದಿ ರಾಜ್ಯಕ್ಕೆ ಹೊರಗಡೆಯಿಂದ ಆಗಮಿಸಿದ್ದಾರೆ ಎಂದು ‘ವಲಸಿಗರ’ ಮಾಹಿತಿ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 56,981 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 56,362 ಜನರು ಮನೆಗಳಲ್ಲಿ ಮತ್ತು 619 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಒಟ್ಟು 182 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ 43,669 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 41,814 ಮಾದರಿಗಳ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 4,764 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇವುಗಳಲ್ಲಿ 4,644 ಮಾದರಿಗಳು ಋಣಾತ್ಮಕವಾಗಿವೆ ಎಂದು ವಿವರಿಸಿದರು.
ಇಂದು 6 ಪ್ರದೇಶಗಳನ್ನು ಕೂಡ ಹಾಟ್ ಸ್ಪಾಟ್ಗೆ ಸೇರಿಸಲಾಗಿದೆ. ಕಾಸರಗೋಡ್ ಜಿಲ್ಲೆಯ ನೀಲೇಶ್ವರಂ, ಕಾಸರಗೋಡು ಪುರಸಭೆಗಳು, ಕಲ್ಲಾರ್, ಇಡುಕ್ಕಿ ಜಿಲ್ಲೆಯ ವಂದನ್‌ಮೇಡು, ಕರುನಾಪುರಂ ಮತ್ತು ವಯನಾಡ್ ಜಿಲ್ಲೆಯ ತಾವಿಂಜಾಲ್ ಮುಂತಾದವು ಹೊಸ ಹಾಟ್ ಸ್ಪಾಟ್ ಗಳು. ಈಗಿನಂತೆ, ಪ್ರಸ್ತುತ ಒಟ್ಟು 22 ಹಾಟ್ ಸ್ಪಾಟ್‌ಗಳಿವೆ ಎಂದು ತಿಳಿಸಿದರು.
Comments are closed.