ನವದೆಹಲಿ: ಬಾಡಿಗೆ ಕೇಳಿದ ಮನೆ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಡಿಗೆ ಪಾವತಿಸಬೇಕೆಂದು ಒತ್ತಡ ಹಾಕಿದ 10 ಮಂದಿ ಮನೆ ಮಾಲೀಕರ ವಿರುದ್ದ ಎಫ್ ಐ ಆರ್ ದಾಖಲು ಮಾಡಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾರ್ತ್ ವೆಸ್ಟ್ ಜಿಲ್ಲೆಯ ಮುಖರ್ಜಿ ನಗರ್ ಪೊಲೀಸ್ ಠಾಣೆ ವ್ಯಾಪಿಯ ಒಂಬತ್ತು ಮಂದಿ, ಸೌತ್ ವೆಸ್ಟ್ ಜಿಲ್ಲೆಯ ಒಬ್ಬ ಮಾಲೀಕರ ವಿರುದ್ದ ಎಫ್ ಐ ಆರ್ ದಾಖಲಿಸಿ ಕೊಳ್ಳಲಾಗಿದೆ.
ಲಾಕ್ ಡೌನ್ ಅವಧಿಯಲ್ಲಿ ಮನೆ ಮಾಲೀಕರು ಬಾಡಿಗೆ ಪಾವತಿಸುವಂತೆ ತಮ್ಮ ಮೇಲೆ ತೀವ್ರ ಒತ್ತಡ ಹಾಕುತ್ತಿದ್ದಾರೆ ಎಂದು ಮುಖರ್ಜಿ ನಗರ ಸುತ್ತಮುತ್ತಲ ಪ್ರದೇಶದ ಕೆಲ ಪಿಜಿ ವಿದ್ಯಾರ್ಥಿಗಳು, ಇತರರು ನೀಡಿದ ದೂರುಗಳ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಮಾಲಿಕರು ಮನೆ ಬಾಡಿಗೆಗಾಗಿ ಒತ್ತಡ ಹಾಕಬಾರದೆಂದು, ಯಾರಾದರೂ ಮನೆ ಬಾಡಿಗೆ ಪಾವತಿಸದಿದ್ದರೆ ಲಾಕ್ ಡೌನ್ ಅವಧಿ ಮುಗಿದ ನಂತರ ಸರ್ಕಾರವೇ ಮನೆ ಬಾಡಿಗೆ ಪಾವತಿಸುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮನೆ ಮಾಲೀಕರಿಗೆ ಮಾರ್ಚ್ ತಿಂಗಳಲ್ಲಿ ಮನವಿಮಾಡಿಕೊಂಡಿದ್ದರು. ಒಂದು ವೇಳೆ ಮನೆ ಬಾಡಿಗೆ ಒತ್ತಡಹಾಕಿದರೆ ಪೊಲೀಸ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
Comments are closed.