ರಾಷ್ಟ್ರೀಯ

ಆಂಧ್ರದಲ್ಲಿ ಅಮಾನತಾಗಿದ್ದ ವೈದ್ಯರೊಬ್ಬರನ್ನು ಅಮಾನುಷವಾಗಿ ಕೈಗಳನ್ನು ಸರಪಳಿಯಿಂದ ಕಟ್ಟಿ ರಸ್ತೆ ಮೇಲೆ ಎಳೆದಾಡಿ ಪೊಲೀಸರು !

Pinterest LinkedIn Tumblr

ಹೈದ್ರಾಬಾದ್: ವೈದ್ಯರಿಗೆ ಎನ್-95 ಮಾಸ್ಕ್ ಕೊರತೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದ ಕಾರಣಕ್ಕೆ ಎರಡು ತಿಂಗಳ ಹಿಂದೆ ಸರ್ಕಾರದಿಂದ ಅಮಾನತುಗೊಳಗಾಗಿದ್ದ ಅರವಳಿಕೆ ತಜ್ಞ ವೈದ್ಯರೊಬ್ಬರ ಕೈಗಳನ್ನು ಸರಪಳಿಯಿಂದ ಕಟ್ಟಿ ರಸ್ತೆ ಮೇಲೆ ಎಳೆದಾಡಿ ವಿಶಾಖಪಟ್ಟಣಂ ಪೊಲೀಸರು ಅಮಾನುಷವಾಗಿ ಹಲ್ಲೆ ಗೈದಿರುವ ಘಟನೆ ನಡೆದಿದೆ.

ಡಾ. ಸುಧಾಕರ್ ಈ ರೀತಿ ಹಲ್ಲೆಗೊಳಗಾದ ವೈದ್ಯರಾಗಿದ್ದಾರೆ. ನೂರಾರು ಜನರು ಈ ಅಮಾನುಷ ಘಟನೆಯನ್ನು ಮೂಕರಂತೆ ವೀಕ್ಷಿಸಿದ್ದಾರೆ. ಯಾರೂ ಕೂಡಾ ಪ್ರಶ್ನಿಸಿಲ್ಲ.

ವೈದ್ಯರ ಎರಡು ಕೈಗಳನ್ನು ಸರಪಳಿಯಿಂದ ಕಟ್ಟಿದ್ದ ಪೊಲೀಸರು ಮನಬಂದಂತೆ ಹಲ್ಲೆಗೈದಿದ್ದಾರೆ. ಬಳಿಕ ಆಟೋ ರಿಕ್ಷಾವೊಂದರ ಮೂಲಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ವೈದ್ಯರಿಗೆ ಎನ್ -95 ಮಾಸ್ಕ್ ಗಳನ್ನು ಪೂರೈಕೆ ಮಾಡುತ್ತಿಲ್ಲ, ಒಂದು ಮಾಸ್ಕ್ ನ್ನು 15 ದಿನಗಳ ಕಾಲ ಬಳಸಿ ಎಂದು ಹೇಳುತ್ತಿದ್ದಾರೆ. ಎಂದು ಡಾ. ಸುಧಾಕರ್ ಮಾರ್ಚ್ ತಿಂಗಳಲ್ಲಿ ಆರೋಪ ಮಾಡಿದ್ದರು. ಆದ್ದರಿಂದ ತಪ್ಪು ಮಾಹಿತಿ ಹರಡಿದ ದೂರಿನ ಆಧಾರದ ಮೇಲೆ ಅವರನ್ನು ಆರೋಗ್ಯ ಇಲಾಖೆ ಅಮಾನತು ಮಾಡಿತ್ತು.

ವೈದ್ಯರ ಮೇಲೆ ಹಲ್ಲೆ ನಡೆಸಿದ ಕಾನ್ ಸ್ಪೇಬಲ್ ಗಳನ್ನು ವೈಜಾಗ್ ಪೊಲೀಸ್ ಆಯಕ್ತರಾದ ಆರ್ ಕೆ ಮೀನಾ ಅಮಾನತುಮಾಡಿದ್ದಾರೆ.

ವೈದ್ಯರ ಮೇಲೆ ಪೊಲೀಸರ ಹಲ್ಲೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಆಂಧ್ರಪ್ರದೇಶ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರತಿಪಕ್ಷಗಳಾದ ಟಿಡಿಪಿ, ಸಿಪಿಐ ಮತ್ತಿತರ ಪಕ್ಷಗಳು ಈ ಘಟನೆಯನ್ನು ಖಂಡಿಸಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಪರಿಣಾಮ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿವೆ.

Comments are closed.