ನವದೆಹಲಿ: ಅತಿ ಹೆಚ್ಚು ಕೊರೊನಾ ಪೀಡಿತರು ಹೊಂದಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ ಎಂದು ಸರ್ಕಾರ ಹೇಳಿದೆ. ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ 2 ಮಂದಿ ಮಾತ್ರ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದೆ.
ಇಲ್ಲಿಯವರೆಗೆ ಭಾರತದಲ್ಲಿ 24 ಲಕ್ಷ ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, 3,163 ಮಂದಿ ಸಾವನ್ನಪ್ಪಿದ್ದಾರೆ. ವಿಶ್ವದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 41 ಮಂದಿ ಮೃತಪಡುತ್ತಿದ್ದಾರೆ.
1 ಲಕ್ಷ ಮಂದಿಗೆ ಯಾವ ದೇಶದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ?
(ಆವರಣದಲ್ಲಿ ನೀಡಿರುವುದು ಒಟ್ಟು ಸಾವಿನ ಸಂಖ್ಯೆ)
ಅಮೆರಿಕ 26.6(87,180), ಇಂಗ್ಲೆಂಡ್ 52.1(34,636), ಇಟಲಿ 52.8(31,908), ಫ್ರಾನ್ಸ್ 41.9(28,059), ಸ್ಪೇನ್ 59.2(27,650), ನೆದರ್‍ಲ್ಯಾಂಡ್ 33.0(5,680), ಸ್ವೀಡನ್ 36.1(3,679) ಭಾರತ 0.2(3,163) ಮಂದಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಯಲ್ಲಿ(ಇಂದು ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ ವೇಳೆ) ಒಟ್ಟು 1,01,475 ಪರೀಕ್ಷೆಗಳನ್ನು ನಡೆಸಲಾಗಿದ್ದು 4,970 ಮಂದಿಗೆ ಸೋಂಕು ಬಂದಿದೆ. ಒಟ್ಟು 2,350 ಮಂದಿ ಗುಣಮುಖರಾಗಿದ್ದು, 134 ಮಂದಿ ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಇಲ್ಲಿಯವರೆಗೆ 24,04,267 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದ್ದು, ಒಟ್ಟು 1,01,139 ಮಂದಿಗೆ ಸೋಂಕು ಬಂದಿದೆ. 39,174 ಮಂದಿ ಡಿಸ್ಚಾರ್ಜ್ ಆಗಿದ್ದು, 58,802 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 3,163 ಮಂದಿ ಸಾವನ್ನಪ್ಪಿದ್ದಾರೆ.
ಯಾವ ರಾಜ್ಯದಲ್ಲಿ ಎಷ್ಟು?
ಮಹಾರಾಷ್ಟ್ರ 35,058, ತಮಿಳುನಾಡು 11,760, ಗುಜರಾತ್ 11,745, ದೆಹಲಿ 10,054, ರಾಜಸ್ಥಾನ 5,507, ಮಧ್ಯಪ್ರದೇಶ 5,236, ಉತ್ತರ ಪ್ರದೇಶ 4,605, ಪಶ್ಚಿಮ ಬಂಗಾಳ 2,825, ಆಂಧ್ರಪ್ರದೇಶದಲ್ಲಿ 2,474 ಮಂದಿಗೆ ಸೋಂಕು ಬಂದಿದೆ.
Comments are closed.