ನವದೆಹಲಿ: ಜೂನ್ 1 ರಿಂದ ದೇಶದಲ್ಲಿ 200 ವಿಶೇಷ ರೈಲುಗಳನ್ನು ಓಡಿಸಲಾಗುವುದು. ಈ ಮೊದಲು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುತ್ತಿತ್ತು, ಆದರೆ ಈಗ ಅದರ ಟಿಕೆಟ್‌ಗಳನ್ನು ಸ್ಟೇಷನ್ ಕೌಂಟರ್ ಮತ್ತು ಅಂಚೆ ಕಚೇರಿಯಿಂದಲೂ ಕಾಯ್ದಿರಿಸಬಹುದಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ಭಾರತೀಯ ರೈಲ್ವೆ , ಇದೀಗ ಸೀಟ್ ಬುಕಿಂಗ್ ಮತ್ತು ರದ್ದತಿ ಸೌಲಭ್ಯ ಅಂಚೆ ಕಚೇರಿಗೂ ಕೂಡ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.
ಇದೇವೇಳೆ ಸ್ಪೀಡ್ ಪೋಸ್ಟ್ ಸೌಲಭ್ಯದ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಅಂಚೆ ಕಚೇರಿಯಿಂದ ಸುಮಾರು 15 ದೇಶಗಳಿಗಾಗಿ ಸ್ಪೀಡ್ ಪೋಸ್ಟ್ ಸೇವೆಯನ್ನೂ ಕೂಡ ಪುನರಾರಂಭಿಸಲಾಗಿದೆ ಎಂದಿದ್ದಾರೆ. ಆದರೆ, ಈ ಅಂಚೆಗಳ ಡಿಲೆವರಿ ಸಮಯವೂ ವಾಯುಯಾನ ಸೇವೆಗಳ ಆರಂಭದ ಮೇಲೆ ಅವಲಂಭಿಸಿದೆ ಎಂದೂ ಕೂಡ ಅವರು ಸ್ಪಷ್ಟಪಡಿಸಿದ್ದಾರೆ.
ನಿನ್ನೆಯಷ್ಟೇ ಈ ಕುರಿತು ಹೇಳಿಕೆ ನೀಡಿದ್ದ ಕೇಂದ್ರ ರೇಲ್ವೆ ಸಚಿವ ಪಿಯುಶ್ ಗೋಯಲ್, ದೇಶದಲ್ಲಿ ಎಲ್ಲವನ್ನು ಸಾಮಾನ್ಯ ಸ್ಥಿತಿಗೆ ತರುವ ಸಮಯ ಬಂದಿದೆ. ಹೀಗಾಗಿ ಶೀಘ್ರದಲ್ಲಿಯೇ ಜನಸಾಮಾನ್ಯರಿಗಾಗಿ ರೇಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ ನಿಂದ ಟಿಕೆಟ್ ವಿತರಿಸುವ ಸೇವೆ ಆರಂಭಿಸಲಾಗುವುದು ಎಂದಿದ್ದರು. ಇದಕ್ಕಾಗಿ ಶೀಘ್ರದಲ್ಲಿಯೇ ಇನ್ನೂ ಹಲವು ರೈಲುಗಳನ್ನು ಹಳಿಗಳಿಗೆ ಇಳಿಸಲಾಗುವುದು ಎಂದಿದ್ದರು.
Comments are closed.