ರಾಷ್ಟ್ರೀಯ

ಉತ್ತರ ಪ್ರದೇಶದ ಗೋರಖ್ ಪುರದಲ್ಲಿ 60 ನಿಮಿಷಗಳಲ್ಲಿ 52 ಬಾವಲಿಗಳ ಸಾವು: ಕೊರೋನಾ ನಡುವೆ ಹೊಸ ಆತಂಕ

Pinterest LinkedIn Tumblr

ಗೋರಖ್ ಪುರ: 60 ನಿಮಿಷಗಳಲ್ಲಿ 52 ಬಾವಲಿಗಳು ಸಾವನ್ನಪ್ಪಿದ್ದು, ಕೊರೋನಾ ನಡುವೆ ಹೊಸ ಆತಂಕ ಮೂಡಿದೆ.

ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಈ ಘಟನೆ ವರದಿಯಾಗಿದ್ದು, ಒಟ್ಟಾರೆ ಈ ವರೆಗೂ 300 ಬಾವಲಿಗಳ ಸಾವು ಸಂಭವಿಸಿದೆ. 6೦ ನಿಮಿಷಗಳಲ್ಲಿ ಬರೊಬ್ಬರಿ 52 ಬಾವಲಿಗಳು ಸಾವನ್ನಪ್ಪಿರುವುದು ಇನ್ನಷ್ಟು ಆತಂಕ ಹೆಚ್ಚುವಂತೆ ಮಾಡಿದೆ.

ಘಟನೆ ವರದಿಯಾಗುತ್ತಿದ್ದಂತೆಯೇ ವಿಭಾಗೀಯ ಅರಣ್ಯಾಧಿಕಾರಿ ಅವಿನಾಶ್ ಕುಮಾರ್ ಸ್ಥಳಕ್ಕೆ ಆಗಮಿಸಿದ್ದು, ಇಂಡಿಯನ್ ವೆಟರ್ನಿಟಿ ರಿಸರ್ಚ್ ಇನ್ಸ್ಟಿಟ್ಯೂಟ್ ಗೆ (ಐವಿಆರ್ ಐ) ಗೆ 3 ಮೃತ ಬಾವಲಿಗಳನ್ನು ಸಾವಿನ ಕಾರಣ ತಿಳಿಯಲು ಕಳಿಸಿಕೊಡಲಾಗಿದೆ. ಬಿಸಿ ಹವೆಯಿಂದಾಗಿ ಅಥವಾ ಕ್ರಿಮಿನಾಶಕಗಳಿಂದಾಗಿ ಈ ಸಾವು ಸಂಭವಿಸಿರಬಹುದು ಇದನ್ನು ಬಹುಬೇಗ ಕೊರೋನಾಗೆ ತಳುಕು ಹಾಕುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸ್ಥಳೀಯರು ಇದಕ್ಕೆ ಭಿನ್ನವಾದ ಅಭಿಪ್ರಾಯವನ್ನೆ ವ್ಯಕ್ತಪಡಿಸುತ್ತಿದ್ದು, ಈ ಹಿಂದೆಯೂ ನಾವು ಸಾಕಷ್ಟು ಬಿಸಿ ಹವೆಯನ್ನು ಕಂಡಿದ್ದೇವೆ, ಆದರೆ ಈ ಪರಿಪ್ರಮಾಣದಲ್ಲಿ ಬಾವಲಿಗಳು ಸಾವನ್ನಪ್ಪಿರಲಿಲ್ಲ. ಅಷ್ಟೇ ಅಲ್ಲದೇ ಬಾವಲಿಗಳಿಗೆ ನೀರನ್ನು ಯಾರು ತಾನೆ ಉಣಿಸುತ್ತಾರೆ? ಇದರಲ್ಲಿ ಅಧಿಕಾರಿಗಳು ಏನನ್ನೋ ಮರೆಮಾಚುತ್ತಿದ್ದಾರೆ. ಒಂದು ಗಂಟೆಯಲ್ಲಿ 52 ಬಾವಲಿಗಳು ಸಾವನ್ನಪ್ಪಲು ಹೇಗೆ ತಾನೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Comments are closed.