ರಾಷ್ಟ್ರೀಯ

ಜೂನ್ 1 ರಿಂದ 5 ಪ್ರಮುಖ ಬದಲಾವಣೆಗಳು

Pinterest LinkedIn Tumblr


ಜೂನ್ 1 ರಿಂದ ಅನೇಕ ನಿಯಮಗಳು ಬದಲಾಗುತ್ತಿದ್ದು, ಇವು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ, ಪಡಿತರ ಚೀಟಿಯಿಂದ ಹಿಡಿದು ರೇಲ್ವೆ ಹಾಗೂ ಫ್ಲೈಟ್ ಗೆ ಸಂಬಂಧಿಸಿದ ಹಲವು ಬದಲಾವಣೆಗಳು ಶಾಮೀಲಾಗಿವೆ. ಕೊರೊನಾ ವೈರಸ್ ಹಿನ್ನೆಲೆ ಘೋಷಿಸಲಾಗಿರುವ ಲಾಕ್ ಡೌನ್ ನಡುವೆಯೇ ಜೂನ್ 1ರಿಂದ 200 ಟ್ರೈನ್ ಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಕೂಡ ಬದಲಾಗುತ್ತಿದೆ. ಹಾಗಾದರೆ ಬನ್ನಿ ಜೂನ್ 1 ರಿಂದಾಗುವ ಈ ಬದಲಾವಣೆಗಳನ್ನು ನೀವು ತಿಳಿದುಕೊಳ್ಳಿ.

ಒನ್ ನೇಶನ್ ಒನ್ ರೇಶನ್ ಕಾರ್ಡ್ ಸ್ಚೀಮ್
ದೇಶಾದ್ಯಂತ ಜೂನ್ 1 ರಿಂದ ಒನ್ ನೇಶನ್ ಒನ್ ರೇಶನ್ ಕಾರ್ಡ್ ಯೋಜನೆ ಜಾರಿಗೆ ಬರುತ್ತಿದೆ. ದೇಶಾದ್ಯಂತದ ಸುಮಾರು 20 ರಾಜ್ಯಗಳಲ್ಲಿ ಏಕಕಾಲಕ್ಕೆ ಈ ಯೋಜನೆ ಜಾರಿಗೆ ಬರುತ್ತಿದೆ. ಈ ಯೋಜನೆ ಜಾರಿಗೆ ಬರುವುದರಿಂದ ನೀವು ದೇಶದ ಯಾವುದೇ ಮೂಲೆಯಲ್ಲಿ ಇರುವ ಸರ್ಕಾರಿ ಪಡಿತರ ಅಂಗಡಿಯಿಂದ ಪಡಿತರವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಅಡಿ ದೇಶದ ಬಡ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಡಿತರವನ್ನು ಒದಗಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

ಹಳಿಗಳ ಮೇಲೆ ಓಡಾಡಲಿವೆ 200 ರೈಲುಗಳು
ಕೊರೊನಾ ವೈರಸ್ ಕಾರಣ ಜಾರಿಗೆ ಬಂದಿರುವ ಲಾಕ್ ಡೌನ್ ಬಳಿಕ ಭಾರತೀಯ ರೈಲು ಇಲಾಖೆ ಕೂಡ ಮೂನ್ 1 ರಿಂದ ಸುಮಾರು 200 ರೈಲುಗಳ ಸಂಚಾರವನ್ನು ಪುನರಾರಂಭಿಸುವ ಘೋಷಣೆ ಮಾಡಿದೆ. ಈಗಾಗಲೇ ಈ ರೈಳುಗಲಿಗಾಗಿ ಆನ್ಲೈನ್ ಬುಕಿಂಗ್ ಪ್ರಕ್ರಿಯೆ ಕೂಡ ಆರಂಭವಾಗಿದೆ. ಲಾಕ್ ಡೌನ್ ನಿಂದ ಒಂದು ವೇಳೆ ನೀವೂ ಕೂಡ ಯಾವುದೇ ನಗರದಲ್ಲಿ ಸಿಲುಕಿಕೊಂಡಿದ್ದರೆ, ಈ ರೈಲುಗಳ ಸಹಾಯದಿಂದ ನಿಮ್ಮ ಮನೆಗೆ ನೀವು ಮರಳಬಹುದು. ಈ ಎಲ್ಲ ಟ್ರೈನ್ ಗಳು ಇಲಾಖೆಯ ಈ ಮೊದಲಿನ ಟೈಮ್ ಟೇಬಲ್ ಆಧರಿಸಿ ಓಡಾಟ ನಡೆಸಲಿವೆ.

ಗೋಏಯರ್ ಫ್ಲೈಟ್ ಸೇವೆ ಆರಂಭಗೊಳ್ಳಲಿದೆ
GoAir ವಿಮಾನಯಾನ ಸಂಸ್ಥೆ ಕೂಡ ತನ್ನ ದೇಶೀಯ ವಿಮಾನಯಾನ ಸೇವೆಯನ್ನು ಆರಂಭಿಸುತ್ತಿದೆ. ಹಾಗೆ ನೋಡಿದರೆ ಹಲವು ವಿಮಾನಯಾನ ಕಂಪನಿಗಳು ಈಗಾಗಲೇ ಮೇ 25ರಿಂದ ತಮ್ಮ ವಿಮಾನಯಾನ ಸೇವೆಗಳನ್ನು ಆರಂಭಿಸಿವೆ. ಆದರೆ, GoAir ಜೂನ್ 1 ರಿಂದ ತನ್ನ ವಿಮಾನಯಾನ ಸೇವೆ ಆರಂಭಿಸಲು ಯೋಜನೆ ರೂಪಿಸಿದೆ. ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದೀಪ್ ಸಿಂಗ್ ಪುರೀ ಪ್ರಕಾರ, ಲಾಕ್ ಡೌನ್ ಬಳಿಕ ವಿಮಾನದಲ್ಲಿ ಪ್ರಯಾಣ ಬೆಳೆಸಲು ನಿಮಗೆ ಹಲವು ರೀತಿಯ ನಿಯಮಗಳನ್ನು ಅನುಸರಿಸಬೇಕಾಗಲಿದೆ

ಉತ್ತರ ಪ್ರದೇಶದಲ್ಲಿ ಆರಂಭಗೊಳ್ಳಲಿದೆ ಬಸ್ ಸೇವೆ
ಜೂನ್ 1 ರಿಂದ ಉತ್ತರ ಪ್ರದೇಶದಲ್ಲಿ ರೋಡ್ ವೇಸ್ ಸೇವೆ ಆರಂಭಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲ ಮೇ 30 ರವರೆಗೆ ರಾಜ್ಯಾದ್ಯಂತ ಇರುವ ಎಲ್ಲ ಬಸ್ ಗಳನ್ನು ಸ್ಯಾನಿಟೈಸ್ ಹಾಗೂ ಫಿಟ್ ಆಗಿಡಲು ಸರ್ಕಾರ ಆದೇಶ ಕೂಡ ನೀಡಿದೆ. ಜೊತೆಗೆ, ಲಾಕ್ ಡೌನ್ ನಿಯಮಾವಳಿಗಳ ಪಾಲನೆ ಮಾಡಲು ಕೂಡ ಹೇಳಲಾಗಿದೆ.

ಅಡುಗೆ ಅನಿಲ ಸಿಲಿಂಡರ್ ಹಾಗೂ ಪೆಟ್ರೋಲ್ ಬೆಲೆ
ಪ್ರತಿ ತಿಂಗಳ ಒಂದನೇ ತಾರಿಖೀಗೆ ಅಡುಗೆ ಅನಿಲ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಕಳೆದ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿತ್ತು. ಹೀಗಾಗಿ ಜೂನ್ 1 ರಿಂದಲೂ ಕೂಡ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಲಿದೆ. ಸದ್ಯ ದೇಶಾದ್ಯಂತ ಲಾಕ್ ಡೌನ್ 4.೦ ಅಡಿ ಹಲವು ಸಡಿಲಿಕೆಗಳನ್ನು ನೀಡಲಾಗಿದೆ. ಹಲವು ರಾಜ್ಯಗಳು ಪಬ್ಲಿಕ್ ಹಾಗೂ ಪ್ರೈವೇಟ್ ಟ್ರಾನ್ಸ್ಪೋರ್ಟ್ ಗೆ ಅನುಮತಿ ನೀಡಿವೆ. ಇದರೊಂದಿಗೆ ಜೂನ್ 1ರಿಂದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿಯೂ ಕೂಡ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಲಾಕ್ ಡೌನ್ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ VAT ಹೆಚ್ಚಿಸಲಾಗಿದೆ.

Comments are closed.