ರಾಷ್ಟ್ರೀಯ

ಪೈಲೆಟ್‌ಗೆ ಕೊರೊನಾ ಸೋಂಕು ಪಾಸಿಟಿವ್‌: ರಷ್ಯಾಗೆ ಭಾರತೀಯರನ್ನು ಕರೆತರಲು ಹೋಗಿದ್ದ ವಿಮಾನ ವಾಪಾಸ್!

Pinterest LinkedIn Tumblr

ನವದೆಹಲಿ: ರಷ್ಯಾದ ಮಾಸ್ಕೋಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನವನ್ನ ವಾಪಾಸ್‌ ದೆಹಲಿಗೆ ಕರೆಯಿಸಲಾಗಿದೆ. ವಿಮಾನ ಫ್ಲೈ ಮಾಡುತ್ತಿದ್ದ ಪೈಲೆಟ್‌ಗೆ ಕೊರೊನಾ ಸೋಂಕು ಇದ್ದಿದ್ದರಿಂದ ವಿಮಾನವನ್ನ ವಾಪಾಸ್‌ ಕರೆಸಿಕೊಳ್ಳಲಾಗಿದೆ. ಏರ್‌ಬಸ್‌ ಎ-320 ನಿಯೋ ವಿಮಾನ ವಂದೇ ಭಾರತ್ ಮಿಷನ್‌ ಅಡಿಯಲ್ಲಿ ಮಾಸ್ಕೋಗೆ ತೆರಳಿತ್ತು.

ಉಜ್‌ಬೇಕಿಸ್ತಾನದ ವಿಮಾನ ನಿಲ್ದಾಣಕ್ಕೆ ತಲುಪಿದ್ದ ಏರ್‌ ಇಂಡಿಯಾ ವಿಮಾನಕ್ಕೆ ಕಂಟ್ರೋಲ್‌ ರೂಮ್‌ನಿಂದ ಮಾಹಿತಿ ನೀಡಿ ವಾಪಾಸ್‌ ಕರೆಯಿಸಿಕೊಳ್ಳಲಾಗೊದೆ. ಮಾಸ್ಕೋಗೆ ತೆರಳಲು ಪೈಲೆಟ್‌, ಸಿಬ್ಬಂದಿಗಳನ್ನ ಕಳುಹಿಸಿಕೊಡುವಾಗ ಕೊರೊನಾ ಪಾಸಿಟಿವ್‌ ಇರುವುದನ್ನ ನೆಗೆಟಿವ್‌ ಎಂದು ಅಧಿಕಾರಿಗಳು ತಪ್ಪಾಗಿ ಅರ್ಥೈಸಿದ್ದರಿಂದ ಈ ಪ್ರಮಾದ ನಡೆದಿದೆ. ಆದ್ರೆ ಮತ್ತೆ ಇದನ್ನ ಅಲ್ಲಿನ ಅಧಿಕಾರಿಗಳು ಗಮನಿಸಿದ್ದರಿಂದ ವಿಮಾನವನ್ನ ಕರೆಸಿಕೊಳ್ಳಲಾಯ್ತು.

ಬಳಿಕ ಬದಲಿಗೆ ಬೇರೆ ವಿಮಾನವನ್ನ ಮಾಸ್ಕೋಗೆ ಕಳುಹಿಸಿ ಕೊಡಲಾಗಿದೆ. ಇನ್ನು ಮಾಸ್ಕೋಗೆ ತೆರಳುವಾಗ ವಿಮಾನದಲ್ಲಿ ಸಿಬ್ಬಂದಿಗಳು ಬಿಟ್ಟು ಯಾವುದೇ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ಪೈಲೆಟ್‌ ಯಾರನ್ನು ಸಂಪರ್ಕಿಸಿಲ್ಲ, ಆತನಿಂದ ಯಾರಿಗೂ ಸೋಂಕು ಹರಡಿಲ್ಲ ಎಂದು ತಿಳಿದುಬಂದಿದೆ. ಸದ್ಯ ಪೈಲೆಟ್‌ನನ್ನ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇನ್ನು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ವಂದೇ ಮಾತರಂ ಕಾರ್ಯಾಚರಣೆಯಡಿಯಲ್ಲಿ ಹಲವು ವಿಮಾನಗಳು ವಿದೇಶಕ್ಕೆ ಹಾರಿ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರನ್ನ ಕರೆತರುವ ಕೆಲಸ ಮಾಡುತ್ತಿದೆ. ಅಮೆರಿಕ, ಯುಕೆ, ದುಬಾಯಿ, ಕುವೈತ್‌ ಹೀಗೆ ಬೇರೆ ಬೇರೆ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನ ಸುರಕ್ಷಿತವಾಗಿ ಕರೆತರಲಾಗುತ್ತಿದೆ.

Comments are closed.