ರಾಷ್ಟ್ರೀಯ

ಉತ್ತರಾಖಂಡದ ಪ್ರವಾಸೋದ್ಯಮ ಸಚಿವರಿಗೆ ಕೊರೋನಾ ಪಾಸಿಟಿವ್

Pinterest LinkedIn Tumblr


ನವದೆಹಲಿ(ಜೂನ್ 1): ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸಪ್ತಲ್​ ಮಹಾರಾಜ್​​ ಅವರಿಗೆ ತಮ್ಮ ಹೆಂಡತಿಯಿಂದ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರ ಪತ್ನಿಗೆ ಕೊರೋನಾ ಪಾಸಿಟಿವ್ ಬಂದ ಮಾರನೇ ದಿನವೇ ಅಂದರೆ ಭಾನುವಾರ ಸಚಿವರಿಗೂ ಕೊರೋನಾ ಹರಡಿದೆ.

ಅನಾಮಧೇಯ ಮೂಲಗಳಿಂದ ಆರೋಗ್ಯ ಇಲಾಖೆಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಇನ್ನು, ಸಚಿವ ಸಪ್ತಲ್ ಮಹಾರಾಜ್​ ಒಳಗೊಂಡಂತೆ, ಅವರ ಸಂಪರ್ಕ ಹೊಂದಿದ್ದ 22 ಮಂದಿ, ಅವರ ಮಗ ಮತ್ತು ಸೊಸೆಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ಸಚಿವರ ಮಗ ಸುಯೇಶ್​ ರಾವತ್ ಕಳೆದ ವರ್ಷ ನಟಿ ಮೊಹೆನಾ ಕುಮಾರಿ ಸಿಂಗ್ ಅವರನ್ನು ಹರಿದ್ವಾರದಲ್ಲಿ ವರಿಸಿದ್ದರು ಎಂದು ತಿಳಿದು ಬಂದಿದೆ.

ಲಾಕ್​ಡೌನ್​ ವೇಳೆ ಪ್ರವಾಸೋದ್ಯಮ ಸಚಿವ ಸಪ್ತಲ್ ಮಹಾರಾಜ್ ಅವರನ್ನು ಭೇಟಿ ಮಾಡಲು ಕೆಲವರು ದೆಹಲಿಯಿಂದ ಆಗಮಿಸಿದ್ದರು. ಹೀಗಾಗಿ ಡೆಹ್ರಾಡೂನ್ ಆಡಳಿತ ಮಂಡಳಿಯು ಸಚಿವರ ಖಾಸಗಿ ನಿವಾಸವನ್ನು ಕ್ವಾರಂಟೈನ್​ಗೆ ಒಳಪಡಿಸಿದೆ.

ಪ್ರಾಥಮಿಕ ವರದಿ ಪ್ರಕಾರ, ಸಚಿವರ ಸಿಬ್ಬಂದಿಯನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಸಪ್ತಲ್ ಮಹಾರಾಜ್ ಮತ್ತು ಅವರ ಪತ್ನಿ ಸೇರಿ ಸುಮಾರು 40 ಮಂದಿಯನ್ನು ಐಸೋಲೇಶನ್​ನಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಸಚಿವರ ಹೆಂಡತಿ ಇತ್ತೀಚೆಗೆ ದೆಹಲಿಯಲ್ಲಿನ ತಮ್ಮ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರ ಜೊತೆ ಸಾಕಷ್ಟು ಮಂದಿ ಅನುಯಾಯಿಗಳು ಪ್ರಯಾಣಿಸಿದ್ದರು ಎನ್ನಲಾಗಿದೆ.ಸಚಿವ ಸಪ್ತಲ್ ಮಹಾರಾಜ್​ ಮತ್ತು ಅವರ ಪತ್ನಿ ಇಬ್ಬರೂ ಸಹ ಧಾರ್ಮಿಕ ಬೋಧಕರು. ಇಬ್ಬರಿಗೂ ಸಹ ಸಾಕಷ್ಟು ಅನುಯಾಯಿಗಳು ಮತ್ತು ಬೆಂಬಲಿಗರಿದ್ದಾರೆ. ಇವರು ಹರಿಯಾಣ, ದೆಹಲಿ, ಛತ್ತೀಸ್​ಗಢ ಮತ್ತು ಉತ್ತರ ಪ್ರದೇಶದಾದ್ಯಂತ ಸೋಂಕು ಹರಡಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಶುಕ್ರವಾರ ಸಚಿವ ಮಹಾರಾಜ್​ ಸಿಎಂ ತ್ರಿವೇಂದ್ರ ಸಿಂಗ್​ ರಾವತ್​ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. ಈಗ ಮಹಾರಾಜ್​​ಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ, ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಸೇರಿ ಎಲ್ಲಾ ಸಚಿವರು ಸಹ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ.

Comments are closed.