ಸಂಕಷ್ಟದ ಸಮಯದಲ್ಲಿ ಸ್ಟಾರ್ ಹೋಟೆಲ್‌ಗಳಿಗೆ ತಿಂಡಿ, ಊಟ ಮಾಡಲು ಹಾಗೂ ವಾಸ್ತವ್ಯಕ್ಕೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರನ್ನು ತಮ್ಮ ಹೋಟೆಲ್‌ಗಳ ಕಡೆಗೆ ಸೆಳೆಯಲು ದರ ಇಳಿಕೆ ಮಾಡಲು ಹೋಟೆಲ್ ಮಾಲೀಕರ ನಡುವೆ ಸಮಾಲೋಚನೆ ನಡೆದಿದೆ. ಈ ಸಂಬಂಧ ಒಂದೆರಡು ದಿನಗಳಲ್ಲಿಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.
ಸ್ಟಾರ್ ಹೋಟೆಲ್‌ಗಳಲ್ಲಿ ಒಂದು ಊಟಕ್ಕೆ 1,500 ರೂ.ನಿಂದ 5000 ರೂ. ವರೆಗೂ ದರವಿದೆ. ಇನ್ನು ರೂಮ್ ಬಾಡಿಗೆ ಪಡೆಯಬೇಕೆಂದರೆ ದಿನಕ್ಕೆ ಕನಿಷ್ಠ 3,500 ರೂ.ನಿಂದ 10 ಸಾವಿರ ರೂ.ವರೆಗೆ ವೆಚ್ಚ ಮಾಡಬೇಕಿದೆ. ಈಗ ಎಲ್ಲೆಡೆ ಕೊರೊನಾ ಹೆಮ್ಮಾರಿ ಆವರಿಸಿಕೊಂಡಿದ್ದು, ಸಭೆ ಸಮಾರಂಭಗಳು ನಡೆಯುತ್ತಿಲ್ಲ. ಮದುವೆಗಳನ್ನು ಸರಳವಾಗಿ ಮನೆಗಳಲ್ಲೇ ನಡೆಸಲಾಗುತ್ತಿದೆ. ಎರಡೂವರೆ ತಿಂಗಳಿನಿಂದ ಬಾಡಿಗೆ ಇಲ್ಲದೆ ಸಿಬ್ಬಂದಿ ಸಂಬಳ, ವಿದ್ಯುತ್ ಬಿಲ್, ಸ್ವಚ್ಛತೆ, ಸಿಸಿ ಕ್ಯಾಮೆರಾಗಳ ಬಳಕೆ, ಎಸಿ ಸೇರಿದಂತೆ ನಿರ್ವಹಣೆಗೆ ಸಾಕಷ್ಟು ಖರ್ಚು ಬರುತ್ತದೆ. ಈಗಿನ ಪರಿಸ್ಥಿತಿಯಲ್ಲಿ ದುಬಾರಿ ದರವಿದ್ದರೆ ಜನರು ಬರುವುದೂ ಕಷ್ಟ. ಹೀಗಾಗಿ ನಷ್ಟ ಮಾಡಿಕೊಳ್ಳುವ ಬದಲು ದರಗಳನ್ನು ಕಡಿಮೆ ಮಾಡಿದರೆ ಸ್ವಲ್ಪ ಮಟ್ಟಿಗಾದರೂ ಹೊಡೆತದಿಂದ ಪಾರಾಗಬಹುದು ಎಂಬುದು ಸ್ಟಾರ್‌ಹೋಟೆಲ್ ಮಾಲೀಕರ ಲೆಕ್ಕಾಚಾರವಾಗಿದೆ.
ಬೆಂಗಳೂರಿನಲ್ಲಿ ತ್ರಿಸ್ಟಾರ್, ಫೈವ್ ಸ್ಟಾರ್ ಹಾಗೂ ಸೆವೆನ್ ಸ್ಟಾರ್ ವರೆಗೆ 200ಕ್ಕೂ ಹೆಚ್ಚಿನ ಹೋಟೆಲ್‌ಗಳು ಇವೆ. ಕೆಲವು ಹೋಟೆಲ್‌ಗಳನ್ನು ಕ್ವಾರಂಟೈನ್‌ಗೆ ನೀಡಲಾಗಿದೆ. ಉಳಿದ ಹೋಟೆಲ್‌ಗಳಲ್ಲಿ ಗ್ರಾಹಕರು ಇಲ್ಲ. ಸಾವಿರಾರು ಕೊಠಡಿಗಳು ಖಾಲಿ ಉಳಿದಿವೆ.
ಪಂಚತಾರಾ ಹೋಟೆಲ್‌ಗಳಿಗೆ ದೇಶ-ವಿದೇಶಿ ಪ್ರವಾಸಿಗರೇ ಪ್ರಮುಖ ಗ್ರಾಹಕರು. ಸದ್ಯಕ್ಕೆ ವಿದೇಶಿ ಪ್ರವಾಸಿಗರು ಬರುವುದು ಕಷ್ಟ. ಇನ್ನು ಬಿಸಿನೆಸ್ ಚಟುವಟಿಕೆ ಹಿನ್ನೆಲೆಯಲ್ಲಿ ಅಂತರ ರಾಜ್ಯ ಪ್ರವಾಸ ನಡೆಸುವವರು ಕಡಿಮೆ ಆಗಿದ್ದಾರೆ. ಹೀಗಾಗಿ ರೂಮುಗಳು ಖಾಲಿ ಹೊಡೆಯುತ್ತಿವೆ. ಗ್ರಾಹಕರನ್ನು ಸೆಳೆಯಲು ಅನಿವಾರ್ಯವಾಗಿ ದರ ಇಳಿಸಬೇಕು ಎಂಬ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಎಲ್ಲ ಹೋಟೆಲ್‌ಗಳು ಇದೇ ನಿಯಮ ಪಾಲಿಸಬೇಕು ಎಂಬ ಚರ್ಚೆ ನಡೆದಿದೆ.
ಸದ್ಯದ ಪರಿಸ್ಥಿತಿಯಲ್ಲಿಗ್ರಾಹಕರನ್ನು ಬರಮಾಡಿಕೊಳ್ಳಲು ಸ್ಟಾರ್ ಹೋಟೆಲ್‌ಗಳು ಶೇ.30ರಷ್ಟು ದರ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ದರ ಕಡಿತವಾಗಲಿದೆ.
– ಪಿ.ಸಿ. ರಾವ್, ಅಧ್ಯಕ್ಷರು, ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ
Comments are closed.