ರಾಷ್ಟ್ರೀಯ

ಮೊದಲ ರಾತ್ರಿಯೇ ಪತಿಯಿಂದ ಪತ್ನಿಯ ಬರ್ಬರ ಹತ್ಯೆ!

Pinterest LinkedIn Tumblr


ಚೆನ್ನೈ (ಜೂ. 12): ಹೊಸ ಸಂಸಾರದಲ್ಲಿ ತಾನೂ ಒಬ್ಬಳಾಗಿ ಗಂಡನೊಂದಿಗೆ ಸುಖ ಸಂಸಾರ ನಡೆಸಬೇಕೆಂಬ ಕನಸಿನೊಂದಿಗೆ ಆಕೆ ಸಪ್ತಪದಿ ತುಳಿದಿದ್ದಳು. ಆದರೆ, ಸಂಕೋಚ, ನಾಚಿಕೆಯಿಂದ ಮೊದಲ ರಾತ್ರಿಯಂದು ಗಂಡನ ರೂಮಿಗೆ ಕಾಲಿಟ್ಟ ಆಕೆಗೆ ದೊಡ್ಡ ಶಾಕ್ ಕಾದಿತ್ತು. ಹಾಲು ಹಿಡಿದು ರೂಮಿನೊಳಗೆ ಬಂದ ಹೆಂಡತಿಯ ಎದುರು ಕೈಯಲ್ಲಿ ಕಬ್ಬಿಣದ ರಾಡು ಹಿಡಿದ ಗಂಡ ನಿಂತಿದ್ದ. ನೋಡನೋಡುತ್ತಿದ್ದಂತೆ ರಾಡಿನಿಂದ ಆಕೆಯ ತಲೆಗೆ ಹೊಡೆದಿದ್ದ. ರಕ್ತದ ಮಡುವಿನಲ್ಲಿ ಬಿದ್ದ ಆಕೆ ಅಲ್ಲೇ ಪ್ರಾಣ ಬಿಟ್ಟಿದ್ದಳು!

ಇದು ಯಾವುದೋ ಸಿನಿಮಾ ಕತೆಯಲ್ಲ. ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ ನಡೆದಿರುವ ಘಟನೆಯಿದು. ನೂರಾರು ಕನಸುಗಳೊಂದಿಗೆ ತನ್ನಿಂದ ತಾಳಿ ಕಟ್ಟಿಸಿಕೊಂಡ ಹುಡುಗಿಯನ್ನು ಫಸ್ಟ್​ ನೈಟ್ ದಿನವೇ ಗಂಡ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸಂಧ್ಯಾ ಎಂಬ ಯುವತಿ ತನ್ನ ಗಂಡ ನೀತಿವಾಸನ್​ನಿಂದ ಕೊಲೆಯಾದಾಕೆ. ನೀತಿವಾಸನ್ ರೂಮಿಗೆ ಹೋದ ಕೂಡಲೆ ಸಂಧ್ಯಾ ಜೋರಾಗಿ ಕಿರುಚಿಕೊಂಡ ಸದ್ದು ಆಕೆಯ ಮನೆಯವರಿಗೆ ಕೇಳಿಸಿತ್ತು. ತಕ್ಷಣ ಓಡಿಬಂದು ರೂಮಿನ ಬಾಗಿಲು ತೆಗೆದು ನೋಡಿದಾಗ ಸಂಧ್ಯಾ ನೆಲದಲ್ಲಿ ಬಿದ್ದು ನರಳುತ್ತಿದ್ದಳು. ಆಕೆಯ ಸುತ್ತಲೂ ರಕ್ತದೋಕುಳಿಯೇ ಹರಿದಿತ್ತು.

ಹೆಂಡತಿಯನ್ನು ಕೊಲೆ ಮಾಡಿದ ಕೂಡಲೆ ನೀತಿವಾಸನ್​ ಮನೆಯಿಂದ ನಾಪತ್ತೆಯಾಗಿದ್ದ. ಆತನ ಮನೆಯವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಜೂನ್ 10ರಂದು ರಾತ್ರಿ ಹೆಂಡತಿಯನ್ನು ಕೊಂದಿದ್ದ ಆತ ಹತ್ತಿರದ ಕಾಡಿನತ್ತ ಓಡಿ, ಅಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ! ಈ ಘಟನೆಗೆ ಕಾರಣವೇನು ಎಂಬುದು ಯಾರಿಗೂ ತಿಳಿದಿಲ್ಲ.

Comments are closed.