ಹೊಸದಿಲ್ಲಿ: ಕೊರೊನಾ ವೈರಸ್ ಹೆಮ್ಮಾರಿಯಿಂದ ದೇಶದಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಸಡಿಲಿಕೆಯಾಗಿದೆ. ಇದರಿಂದ ಕಳವಳಕಾರಿಯಾಗಿ ಏರುಮುಖವಾಗಿರುವ ಕೊರೊನಾ ಪ್ರಕರಣಗಳ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಹಿರಿಯ ಸಚಿವರ ಜೊತೆ ಮಾತುಕತೆ ನಡೆಸಿದರು.
ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಹಿರಿಯ ಅಧಿಕಾರಿಗಳು ಈ ವಿಡಿಯೋ ಸಭೆಯಲ್ಲಿ ಹಾಜರಿದ್ದರು.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಲಭ್ಯತೆ. ಆರೋಗ್ಯ ರಕ್ಷಾ ಸಾಧನಗಳು ಹಾಗೂ ಇತರ ಅಗತ್ಯ ದಾಸ್ತಾನಿನ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಜೂನ್ ಎಂಟರಿಂದ ಅನ್‌ಲಾಕ್ 1.0 ಆರಂಭವಾಗಿದೆ. ಇದರ ಜತೆಗೆ ಕೊರೊನಾ ಪ್ರಕರಣಗಳ ಸಂಖ್ಯೆಯೂ ತೀವ್ರಗತಿಯಲ್ಲಿ ಏರುತ್ತಿದೆ.
ಹಲವಾರು ಹಸಿರು ವಲಯಗಳು ಕೊರೊನಾ ಕೇಂದ್ರ ಸ್ಥಾನಗಳಾದೆ. ಮಹಾರಾಷ್ಟ್ರ, ಹೊಸದಿಲ್ಲಿ, ತಮಿಳುನಾಡಿನಲ್ಲಿ ಪರಿಸ್ಥಿತಿ ಕೈಮೀರಿದೆ.
ಇದೇ ವೇಳೆ ದೇಶದಲ್ಲಿನ ಕೊರೊನಾ ಪರಿಸ್ಥಿತಿ ಕುರಿತು ಚರ್ಚಿಸಲು ಖುದ್ದು ಪ್ರಧಾನಿ ಮೋದಿ 16 ಮತ್ತು 17ರಂದು ಮುಖ್ಯಮಂತ್ರಿಗಳ ಜತೆ ಸುದೀರ್ಘ ಸಭೆ ನಡೆಸಲಿದ್ದಾರೆ.
Comments are closed.