ರಾಷ್ಟ್ರೀಯ

ಜೂ. 21ಕ್ಕೆ ಸೂರ್ಯ ಗ್ರಹಣ: ಜಾಗ್ರತೆ ವಹಿಸಿ!

Pinterest LinkedIn Tumblr


Surya Grahana: ಸೂರ್ಯ ಗ್ರಹಣವನ್ನು ಒಂದು ಪ್ರಮುಖ ಖಗೋಳಶಾಸ್ತ್ರದ ಘಟನೆ ಎಂದು ವಿಕ್ಷೀಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಸೂರ್ಯ ಗ್ರಹಣ ಹಾಗೂ ಚಂದ್ರಗ್ರಹಣಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಪುರಾಣಿಕ ಗ್ರಂಥಗಳಲ್ಲಿ ಅದರಲ್ಲೂ ವಿಶೇಷವಾಗಿ ಮಹಾಭಾರತದಲ್ಲಿ ಸೂರ್ಯ ಗ್ರಹಣವನ್ನು ಬಣ್ಣಿಸಲಾಗಿದೆ. ಇಲ್ಲಿ ವಿಶೇಷತೆ ಎಂದರೆ ಈ ಗ್ರಹಣದ ಸೂತಕ ಕಾಲವನ್ನು ಪರಿಗಣಿಸಲಾಗುತ್ತಿದ್ದು, ತುಂಬಾ ಮಹತ್ವ ಪಡೆದುಕೊಂಡಿದೆ. ಗ್ರಹಣ ಕಾಲಕ್ಕೆ 12 ಗಂಟೆ ಮುಂಚಿತವಾಗಿ ಸೂತಕ ಕಾಲ ಆರಂಭವಾಗುತ್ತದೆ. ಹಾಗೂ ಗ್ರಹಣ ಮುಕ್ತಾಯದ ಬಳಿಕ ಇದು ಕೂಡ ಅಂತ್ಯವಾಗುತ್ತದೆ.

ಸೂರ್ಯ ಗ್ರಹಣ ಯಾವಾಗ ಸಂಭವಿಸಲಿದೆ?
ಈ ಬಾರಿಯ ಸೂರ್ಯಗ್ರಹಣ 21 ಜೂನ್ 2020 ರ ಬೆಳಗ್ಗೆ 10.20 ಕ್ಕೆ ಆರಂಭವಾಗಲಿದ್ದು, ಮಧ್ಯಾಹ್ನ 3.04ಕ್ಕೆ ಅಂತ್ಯವಾಗಲಿದೆ. ಮಧ್ಯಾಹ್ನ 12.02ಕ್ಕೆ ಇದು ಉಚ್ರಾಯ ಸ್ಥಿತಿಯಲ್ಲಿ ಇರಲಿದೆ.

ಈ ಬಾರಿಯ ಗ್ರಹಣದ ವಿಶೇಷತೆ ಏನು?
ಒಂದೇ ತಿಂಗಳಿನಲ್ಲಿ ಸಂಭವಿಸಲಿರುವ ಎರಡನೇ ಗ್ರಹಣ ಇದಾಗಿದ್ದರಿಂದ ಈ ಗ್ರಹಣ ಭಾರಿ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಈ ಗ್ರಹಣ ಭಾನುವಾರದಂದು ಸಂಭವಿಸಲಿದೆ. ಶಾಸ್ತ್ರಗಳಲ್ಲಿ ಭಾನುವಾರವನ್ನು ಸೂರ್ಯದೇವನ ವಾರ ಎಂದು ಪರಿಗಣಿಸಲಾಗುತ್ತದೆ ಅಂದರೆ ಸೂರ್ಯದೇವನ ವಾರದ ದಿನದಂದೇ ಆತನಿಗೆ ಗ್ರಹಣ ಹಿಡಿಯಲಿದೆ. ಇನ್ನೊಂದೆಡೆ ಈ ಗ್ರಹಣ ಜೂನ್ 21 ರಂದು ಸಂಭವಿಸಲಿದೆ. ಸಾಮಾನ್ಯವಾಗಿ ಜೂನ್ 21ನ್ನು ವರ್ಷದ ಅತಿ ದೊಡ್ಡ ದಿನ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಗ್ರಹಣದ ಅವಧಿ ಕೂಡ ದೀರ್ಘಾವಧಿಯಾಗಿದೆ.

ಯಾವ ಯಾವ ದೇಶಗಳಲ್ಲಿ ಈ ಗ್ರಹಣ ಗೋಚರಿಸಲಿದೆ
ಜೂನ್ 21ರಂದು ಸಂಭವಿಸಲಿರುವ ಗ್ರಹಣ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಗೋಚರಿಸಲಿದೆ. ಭಾರತ ಸೇರಿದಂತೆ ಪಾಕಿಸ್ತಾನ, ಚೀನಾ, ಮಧ್ಯ ಆಫ್ರಿಕಾ ದೇಶಗಳಾಗಿರುವ ಕೆನ್ಯಾ, ಇಥಿಯೋಪಿಯ, ನಾರ್ತ್ ಆಫ್ ಆಸ್ಟ್ರೇಲಿಯಾ, ಹಿಂದೂ ಮಹಾಸಾಗರ ಹಾಗೂ ಯುರೋಪಿಯ ವಿವಿಧ ದೇಶಗಳಲ್ಲಿ ಇದು ಗೋಚರಿಸಲಿದೆ. ಈ ಗ್ರಹಣ ಗೋಚರಿಸಲಿರುವ ಎಲ್ಲ ದೇಶಗಳಲ್ಲಿ ಇದು ತನ್ನ ಪ್ರಭಾವ ತೋರಲಿದೆ ಎಂದು ಜೋತಿಷ್ಯ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ವಲಯಾಕಾರದ ಸೂರ್ಯಗ್ರಹಣವಾಗಿರುವ ಕಾರಣ ಇದು ಎಲ್ಲ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಇನ್ನೊಂದೆಡೆ ಇದೊಂದು ಕೇವಲ ಖಗೋಳಶಾಸ್ತ್ರದ ಘಟನೆಯಾಗಿದೆ ಎಂದು ವಿಜ್ಞಾನ ಹೇಳುತ್ತದೆ.

ಸೂರ್ಯ ಗ್ರಹಣದ ಸೂತಕ ಕಾಲ
ಈ ಸೂರ್ಯಗ್ರಹಣ ಜೂನ್ 21 ರಂದು ಸಂಭವಿಸಲಿರುವ ಕಾರಣ ಈ ಗ್ರಹಣದ ಸೂತಕ ಕಾಲ ಜೂನ್ 20 ರಂದು ಅಂದರೆ ಶನಿವಾರ ರಾತ್ರಿ 21.52ಕ್ಕೆ ಆರಂಭವಾಗಲಿದ್ದು, ಜೂನ್ 21ರಂದು ಮಧ್ಯಾಹ್ನ 13.49ಕ್ಕೆ ಅಂತ್ಯವಾಗಲಿದೆ.

ಸೂತಕ ಕಾಲ ಅಂದರೆ ಏನು?
ಮಾನ್ಯತೆಗಳ ಪ್ರಕಾರ, ಗ್ರಹಣದ ಪೂರ್ವ ಆರಂಭವಾಗಲಿರುವ ಸೂತಕ ಕಾಲದಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ಈ ಅವಧಿಯಲ್ಲಿ ದೇವಾಲಯಗಳ ಕಪಾಟಗಳು ಬಂದ್ ಆಗಿರಲಿವೆ. ಈ ಅವಧಿಯಲ್ಲಿ ಅಗ್ನಿ ಕರ್ಮ ಕೂಡ ನಡೆಸಲಾಗುವುದಿಲ್ಲ. ಇದರಿಂದ ಅಗ್ನಿದೇವ ಕುಪಿತನಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

ಗ್ರಹಣ ಕಾಲದಲ್ಲಿ ಹೊರಹೊಮ್ಮುವ ಶಾಖದಿಂದ ರಕ್ಷಿಸಿಕೊಳ್ಳಿ
ಗ್ರಹಣ ಕಾಲದಲ್ಲಿ ಗ್ರಹ ಪೀಡಿತ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಹಲವು ರೀತಿಯ ನಕಾರಾತ್ಮಕ ಶಕ್ತಿಗಳು ಉತ್ಪನ್ನಗೊಂಡು ಕೆಟ್ಟ ಪರಿಣಾಮ ಬೀರುತ್ತವೆ ಎನ್ನಲಾಗುತ್ತದೆ. ಹೀಗಾಗಿ ಈ ಉರ್ಜೆಯಿಂದ ರಕ್ಷಿಸಿಕೊಳ್ಳಿ. ಇದು ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಗ್ರಹಣದ ಬಳಿಕ ಕೂಡಲೇ ಸ್ನಾನ ಮಾಡಿ.

ಅಡುಗೆ, ಊಟ ಬೇಡ
ಗ್ರಹಣದ ಅವಧಿಯಲ್ಲಿ ಅಡುಗೆ ಮಾಡಬಾರದು ಹಾಗೂ ಊಟ ಕೂಡ ಮಾಡಬಾರದು. ಗರ್ಭವತಿ ಮಹಿಳೆಯರು ಈ ಅವಧಿಯಲ್ಲಿ ಮನೆಯಿಂದ ಹೊರಬೀಳಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.

Comments are closed.