ರಾಷ್ಟ್ರೀಯ

ಏರುತ್ತಲೇ ಇದೆ ತೈಲ ಬೆಲೆ: 20 ದಿನದಲ್ಲಿ ಡೀಸೆಲ್ ರೂ. 10.82, ಪೆಟ್ರೋಲ್ 8.87 ನಷ್ಟು ಏರಿಕೆ

Pinterest LinkedIn Tumblr

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ನಾಗಾಲೋಟಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಸತತ 20ನೇ ದಿನ ಶುಕ್ರವಾರವೂ ತೈಲ ಬೆಲೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಡೀಸೆಲ್ ಮೇಲೆ 17 ಪೈಸೆ ಜಾಸ್ತಿಯಾಗಿದೆ.

ಪರಿಣಾಮ ಇದೇ ಮೊದಲ ಬಾರಿಗೆ ಡೀಸೆಲ್ ರೂ.80 ಗಡಿದಾಟಿದೆ. ಇನ್ನು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.21 ಪೈಸೆ ಜಾಸ್ತಿಯಾಗಿದೆ.

ಕಳೆದ ಮೂರು ವಾರಗಳಲ್ಲಿ ಡೀಸೆಲ್ ಪ್ರತೀ ಲೀಟರ್ ಮೇಲೆ ರೂ.10.82, ಪೆಟ್ರೋಲ್ ಪ್ರತಿ ಲೀಟರ್ ಮೇಲೆ ರೂ.8.87 ಹೆಚ್ಚಳವಾದಂತಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರೂ.85.59 ಹಾಗೂ ಡೀಸೆಲ್ ಬೆಲೆ ರೂ.76.25ಕ್ಕೆ ಮುಟ್ಟಿದೆ.

Comments are closed.