ದೆಹಲಿ (ಜೂನ್ 26); ಕಾಂಗ್ರೆಸ್ ಮುಖಂಡ ಮತ್ತು ಪಕ್ಷದ ರಾಷ್ಟ್ರೀಯ ವಕ್ತಾರ ಅಭಿಷೇಕ್ ಸಿಂಗ್ವಿ ಹಾಗೂ ಅವರ ಪತ್ನಿಗೆ COVID-19 ಪರೀಕ್ಷೆ ನಡೆಸಲಾಗಿದ್ದು ಪಾಸಿಟಿವ್ ಫಲಿತಾಂಶ ಬಂದಿದೆ. ಹೀಗಾಗಿ ಇವರಿಬ್ಬರೂ ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಇಂದು ತಿಳಿಸಿವೆ.
ಜ್ವರದಿಂದ ಬಳಲುತ್ತಿರುವ ಅಭಿಷೇಕ್ ಸಿಂಗ್ವಿ ಕೊರೋನಾದ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದರೆ, ಅವರ ಪತ್ನಿಗೂ ಸಹ ಮಾರಣಾಂತಿಕ ವೈರಸ್ ಸೋಂಕು ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ ಇವರಿಬ್ಬರೂ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮನೆಯಲ್ಲೇ ತಮ್ಮನ್ನು ಪ್ರತ್ಯೇಕಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಗ್ವಿ ಧನಾತ್ಮಕ ಪರೀಕ್ಷೆಯ ನಂತರ ಅವರ ಮಗ ಮತ್ತು ಇತರ ಕುಟುಂಬ ಸದಸ್ಯರು, ಸಿಬ್ಬಂದಿಯನ್ನು ಸಹ COVID-19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
Comments are closed.