ರಾಷ್ಟ್ರೀಯ

ತಮಿಳುನಾಡಿನ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: 6 ಸಾವು..!

Pinterest LinkedIn Tumblr


ಚೆನ್ನೈ: ಕಾರ್ಖಾನೆಯೊಂದರಲ್ಲಿ ಬಾಯ್ಲರ್‌ ಸ್ಫೋಟಗೊಂಡ ಪರಿಣಾಮ ಆರು ಮಂದಿ ಸಾವನ್ನಪ್ಪಿದ 17ಕ್ಕೂ ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಕಡಲೂರು ಜಿಲ್ಲೆಯ ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ವಿದ್ಯುತ್ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಗಾಯಗೊಂಡವರನ್ನು ಎನ್‌ಎಲ್‌ಸಿ ಲಿಗ್ನೈಟ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸರ್ಕಾರಿ ಸ್ವಾಮ್ಯದಲ್ಲಿರುವ ನೈವೇಲಿ ಲಿಗ್ನೆಟ್ ಕಂಪನಿಯಲ್ಲಿ ನೂರಾರು ಜನರು ಕೆಲಸ ಮಾಡುತ್ತಿದ್ದು, ಚೆನ್ನೈನಿಂದ 180 ಕಿ.ಮೀಟರ್ ದೂರದಲ್ಲಿದೆ.

ಇಂದು ಸ್ಫೋಟಗೊಂಡ ಬಾಯ್ಲರ್ ಕಾರ್ಯನಿರ್ವಹಿಸುತ್ತಿರಲಿಲ್ಲ, ಕಳೆದ ಎರಡು ತಿಂಗಳ ಅವಧಿಯಲ್ಲಿ ಸ್ಫೋಟಗೊಂಡ ಎರಡನೇ ಬಾಯ್ಲರ್‌ ಇದಾಗಿದೆ ಎಂದು ತಿಳಿದುಬಂದಿದೆ. ಬಾಯ್ಲರ್‌ ಸ್ಫೋಟಗೊಂಡ ಬೆನ್ನಲ್ಲೇ ಕಾರ್ಖಾನೆಯಿಂದ ಭಾರೀ ಹೊಗೆ ಹೊರಗೆ ಬರುತ್ತಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

Comments are closed.