ರಾಷ್ಟ್ರೀಯ

ವಾಟ್ಸ್​​ಆ್ಯಪ್​, ಫೇಸ್​ಬುಕ್​ಗೆ ಸ್ಪರ್ಧೆ ನೀಡುವ ದೇಶಿಯ Elyments App ಬಿಡುಗಡೆ ಮಾಡಿದ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು

Pinterest LinkedIn Tumblr


ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲದ 59 ಆ್ಯಪ್​ಗಳನ್ನು ಭಾರತದಲ್ಲಿ ನಿಷೇಧ ಮಾಡಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜು. 4 ರಂದು ‘ಆತ್ಮನಿರ್ಭಾರ್​​​ ಭಾರತ್​​ ಇನೋವೇಶನ್​​ ಚಾಲೆಂಜ್’​ಗೆ ಚಾಲನೆ ನೀಡಿದ್ದಾರೆ. ಈ ಚಾಲೆಂಜ್​ನಲ್ಲಿ ಟೆಕ್ಕಿಗಳು ಮತ್ತು ಆ್ಯಪ್​ ಡೆವಲಪರ್ಸ್​ಗಳು ಭಾಗವಹಿಸಬಹುದು ಎಂದು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಆ್ಯಪ್​ಗಳನ್ನು ಅಭಿವೃದ್ಧಿ ಪಡಿಸುವಂತೆ ಈ ಕಾರ್ಯಕ್ರಮದ ಮೂಲಕ ಮೋದಿ ಕರೆ ನೀಡಿದ್ದಾರೆ. ವಿಜೇತರಿಗೆ ಬಹುಮಾನವನ್ನು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ದೇಶದಲ್ಲಿ ‘ಎಲಿಮೆಂಟ್ಸ್’​​ ಎಂಬ ನೂತನ ಆ್ಯಪ್​​ ಬಿಡುಗಡೆಯಾಗಿದೆ.

ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ‘ಎಲಿಮೆಂಟ್ಸ್​​ ಆ್ಯಪ್’​ ಅನ್ನು ಬಿಡುಗಡೆ ಮಾಡಿದ್ದಾರೆ. ನೂತನ ಆ್ಯಪ್​ ಅನ್ನು ಆರ್ಟ್​ ಆಫ್​​ ಲಿವಿಂಗ್​ ಆ್ಯಪ್​ ಮತ್ತು ಸ್ಮಾಟ್​ ಟೆಕ್ನಾಲಜಿ ವಿಭಾಗ ಅಭಿವೃದ್ಧಿ ಪಡಿಸಿದೆ. ಎಲಿಮೆಂಟ್ಸ್​ ಆ್ಯಪ್​​​​​ ಫೇಸ್​ಬುಕ್​ ಮತ್ತು ವಾಟ್ಸ್​​ಆ್ಯಪ್​ಗೆ ಸ್ಪರ್ಧೆ ನೀಡಲಿದೆ. ಭಾರತೀಯರಿಗಾಗಿ ಗೂಗಲ್​ ಪ್ಲೇ ಸ್ಟೋರ್​ ಮತ್ತು ಆ್ಯಪಲ್​​ ಸ್ಟೋರ್​ನಲ್ಲಿ ಲಭ್ಯವಿದೆ.

ಎಲಿಮೆಂಟ್ಸ್​ ಆ್ಯಪ್​ ವಿಶೇಷತೆ;

ಎಲಿಮೆಂಟ್ಸ್​​ ಆ್ಯಪ್​​​ ನಲ್ಲಿ ವಿಡಿಯೋ, ಫ್ರೆಂಡ್​​ ಲೀಸ್ಟ್​ ಹೀಗೆ ಅನೇಕ ಆಯ್ಕೆಗಳಿವೆ. ಅಷ್ಟೇ ಅಲ್ಲದೆ, ನಗದು ವ್ಯವಹಾರ ಮತ್ತು ಸರಕು ಮಾರಾಟಕ್ಕೂ ಅವಕಾಶ ಕಲ್ಪಿಸಿದೆ. ದೇಶಿ ಆ್ಯಪ್​ಗಳನ್ನು ಉತ್ತೇಜಿಸುವ ಸಲುವಾಗಿ ಎಲಿಮೆಂಟ್ಸ್​ ಆ್ಯಪ್​ ಅನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಗೂಗಲ್​ ಪ್ಲೇ ಸ್ಟೋರ್​ನಲ್ಲಿ 2 ಲಕ್ಷಕ್ಕೂ ಅಧಿಕ ಡೌನ್​ಲೋಡ್​ ಕಂಡಿದ್ದು, ಅನೇಕರು ಬಳಸುತ್ತಿದ್ದಾರೆ. 8 ಭಾಷೆಗಳಲ್ಲಿ ಎಲಿಮೆಂಟ್ಸ್​ ಆ್ಯಪ್​ ಲಭ್ಯವಿದೆ.

Comments are closed.