ರಾಷ್ಟ್ರೀಯ

ದೇಶದ ಮೊದಲ Covaxin ಮಾನವ ಪರೀಕ್ಷೆಗೆ AIIMSನಿಂದ ಆಕ್ಷೇಪ

Pinterest LinkedIn Tumblr


ನವದೆಹಲಿ: ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್, ICMR ಸಹಯೋಗದೊಂದಿಗೆ ಭಾರತದ ಮೊಟ್ಟ ಮೊದಲ ಕೊರೊನಾ ಲಸಿಕೆ ಎಂದೇ ಹೇಳಲಾಗುವ ಕೊವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ. ಈ ಲಸಿಕೆಯ ಕ್ಲಿನಿಕಲ್ ಟ್ರಯಲ್ ಗಾಗಿ ದೇಶದ ಒಟ್ಟು 12 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ದೆಹಲಿ ಹಾಗೂ ಪಟ್ನಾ AIIMSಗಳೂ ಕೂಡ ಶಾಮೀಲಾಗಿವೆ. ಏತನ್ಮಧ್ಯೆ ದೆಹಲಿಯ AIIMS ತಜ್ಞರ ತಂಡ ಪರೀಕ್ಷೆಯ ಪ್ರೋಟೋಕಾಲ್ ಗಳಲ್ಲಿ ಬದಲಾವಣೆ ತರಲು ಸೂಚಿಸಿದೆ. ಹೌದು, ಈ ಪರೀಕ್ಷೆಗಾಗಿ ನಿಗದಿಪಡಿಸಲಾಗಿರುವ ಪ್ರೋಟೋಕಾಲ್ ಗಳ ಒಟ್ಟು 11 ಪಾಯಿಂಟ್ ಗಳಲ್ಲಿ ಬದಲಾವಣೆ ಮಾಡಲು ತಜ್ಞರ ತಂಡ ಸಲಹೆ ನೀಡಿದೆ. ಈ ರೀತಿ ಮಾಡುವುದರಿಂದ ಪರೀಕ್ಷೆ ಹೆಚ್ಚು ವೃತ್ತಿಪರತೆ ಹಾಗೂ ನಿಜಾಂಶಗಳಿಂದ ಕೂಡಿರಲಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಏಮ್ಸ್ ತಜ್ಞರು ICMR ಪ್ರೋಟೋಕಾಲ್ ಗಳು ವೇಗದ ಪರೀಕ್ಷೆ ನಡೆಸಲು ಬಯಸುತ್ತವೆ. ಆದರೆ, ಇದಕ್ಕಾಗಿ ಸ್ಯಾಂಪಲ್ ಟಾರ್ಗೆಟ್ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಫಲಿತಾಂಶ ಅಷ್ಟೇ ನಿಖರವಾಗಿ ಬರಲಿದೆ. ‘ಏಮ್ಸ್ ಹಾಗೂ ಇತರೆ ಸಂಸ್ಥೆಗಳ ದೃಷ್ಟಿಕೋನದಲ್ಲಿ ಅಂತರ ಎಂದರೆ ಏಮ್ಸ್ ಸಂಶೋಧನೆಯ ನಿಖರ ಫಲಿತಾಂಶ ಬಯಸುತ್ತದೆ ಮತ್ತು ಇದಕ್ಕಾಗಿ ಮುಂಜಾಗೃತೆಯ ಜೊತೆಗೆ ಪೂರ್ವ ನಿಯೋಜನೆ ಮೊದಲ ಷರತ್ತಾಗಲಿದೆ’ ಎಂದು ತಜ್ಞರು ಹೇಳಿದ್ದಾರೆ.

ಸದ್ಯದ ಪ್ರೋಟೋಕಾಲ್ ಗಳ ಪ್ರಕಾರ ಮೊದಲ ಹಂತದಲ್ಲಿ 18-55 ವರ್ಷ ವಯಸ್ಸಿನ ಆರೋಗ್ಯವಂತ ಹಾಗೂ ಎರಡನೇ ಹಂತದಲ್ಲಿ 12-65 ವರ್ಷದೊಳಗಿನ ಜನರ ಮೇಲೆ ಈ ವ್ಯಾಕ್ಸಿನ್ ನ ಪರೀಕ್ಷೆ ನಡೆಯಲಿದೆ.

ಆಗಸ್ಟ್ 15ರವರೆಗೆ ಲಸಿಕೆ ಬಿಡುಗಡೆಗೆ ಸಿದ್ಧತೆ
ಕ್ಲಿನಿಕಲ್ ಪ್ರಯೋಗಗಳು ಪೂರ್ಣಗೊಂಡ ಬಳಿಕ ಆಗಸ್ಟ್ 15 ರೊಳಗೆ ಕೋವಿಡ್ -19 ಸ್ವದೇಶಿ ಲಸಿಕೆಯನ್ನು ಬಿಡುಗಡೆ ಮಾಡಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಯೋಜನೆ ರೂಪಿಸಿದೆ. ಇದಕ್ಕಾಗಿ ದೇಶಾದ್ಯಂತ 12 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದ್ದು, ಜುಲೈ 7 ರೊಳಗೆ ಟ್ರಯಲ್ ಆರಂಭಿಸಲು ಸೂಚಿಸಲಾಗಿದೆ.

ಲಸಿಕೆ ಪರೀಕ್ಷೆಯಲ್ಲಿ ತೊಡಗಿರುವ ಸಂಸ್ಥೆಗಳ ಪಟ್ಟಿಯಲ್ಲಿ ನಿಜಾಮ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ನಿಮ್ಸ್) ಹೈದರಾಬಾದ್, ಕಿಂಗ್ ಜಾರ್ಜ್ ಆಸ್ಪತ್ರೆ, (ವಿಶಾಖಪಟ್ಟಣಂ), ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ರೋಹ್ಟಕ್), ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ನವದೆಹಲಿ ಮತ್ತು ಏಮ್ಸ್ ಪಾಟ್ನಾ ಶಾಮೀಲಾಗಿವೆ.

Comments are closed.