ನವದೆಹಲಿ: ದೇಶದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 8 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾರ ಶನಿವಾರ ಮಾಹಿತಿ ನೀಡಿದೆ.
ಶನಿವಾರ ಮತ್ತೆ ದಾಖಲೆಯ 27,114 ಮಂದಿಯಲ್ಲಿ ವೈರಸ್ ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 8,20,916ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಒಂದೇ ದಿನ 519 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 22,123ಕ್ಕೆ ಏರಿಕೆಯಾಗಿದೆ.
ಕಳೆದ ನಾಲ್ಕು ದಿನಗಳಿಂದ 25 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿವೆ. ಶುಕ್ರವಾರ ಕೂಡ 26,506 ಪ್ರಕರಣ ದಾಖಲಾಗಿದ್ದು. ಈ ವರೆಗಿನ ದೈನಂದಿನ ಗರಿಷ್ಟ ಎನಿಸಿಕೊಂಡಿತ್ತು. ಇಂದು ಕೂಡ 27,114 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಕೊರೋನಾ ಪ್ರಕರಣ 7 ರಿಂದ 8 ಲಕ್ಷಕ್ಕೆ ಕೇವಲ 4 ದಿನದಲ್ಲಿ ಏರಿಕೆಯಾಗಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 238461ಕ್ಕೆ ಏರಿಕೆಯಾಗಿದೆ.
ಇನ್ನು 8,20,916 ಮಂದಿ ಸೋಂಕಿತರ ಪೈಕಿ 5,15,386 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ ದೇಶದಲ್ಲಿ 2,83,407 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.
Comments are closed.