ರಾಷ್ಟ್ರೀಯ

ಭೂಗತ ಪಾತಕಿ ಅಬು ಸಲೇಂ ಸಹಚರ ಬಂಧನ

Pinterest LinkedIn Tumblr

ಮುಂಬಯಿ: ಭೂಗತ ಪಾತಕಿ ಅಬು ಸಲೇಂ ಮತ್ತು ಕುಖ್ಯಾತ ರೌಡಿ ಖಾನ್ ಮುಬಾರಕ್ ಸಹಚರ ಗಜೇಂದ್ರ ಸಿಂಗ್‌ನನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಪೊಲೀಸರು ಬುಧವಾರ ರಾತ್ರಿ ಮುಂಬೈನಲ್ಲಿ ಬಂಧಿಸಿದ್ದಾರೆ.

1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಬು ಸಲೇಂ ಜೊತೆ ಗಜೇಂದ್ರ ಸಿಂಗ್ ನಿಕಟ ಸಂಪರ್ಕ ಹೊಂದಿದ್ದ. ಮುಂಬೈ ಬಾಂಬ್‌ ಸ್ಪೋಟ ಪ್ರಕರಣದಲ್ಲಿ ಅಬು ಸಲೇಂನಿಗೆ ಶಿಕ್ಷೆಯಾದ ನಂತರ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್‌ ಖಾನ್‌ ಮುಬಾರಕ್‌ನೊಂದಿಗೆ ಗಜೇಂದ್ರ ಸಿಂಗ್‌ ಗುರುತಿಸಿಕೊಂಡಿದ್ದನೆಂದು ತಿಳಿದುಬಂದಿದೆ.

‘ಅಬು ಸೇಲಂ ಮತ್ತು ಖಾನ್ ಮುಬಾರಕ್ ಅವರಿಗೆ ಸಂಬಂಧಿಸಿದ ಅಕ್ರಮ ಹಣವನ್ನು ಗಜೇಂದ್ರ ಸಿಂಗ್ ದೆಹಲಿಯಲ್ಲಿ ಹೂಡಿಕೆ ಮಾಡಿದ್ದಾನೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Comments are closed.