ರಾಷ್ಟ್ರೀಯ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇಕಡಾ 23.48ರಷ್ಟು ಜನರಿಗೆ ಕೊರೋನಾ ಸೋಂಕು; ಸೆರೋ ಸಮೀಕ್ಷೆ

Pinterest LinkedIn Tumblr


ನವದೆಹಲಿ(ಜು.21): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇಕಡಾ 23.48ರಷ್ಟು ಜನರಿಗೆ ಕೊರೋನಾ ಸೋಂಕು ಹರಡಿದೆ. ಆದರೂ ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳು ಕೊರೋನಾ ರೋಗ ಲಕ್ಷಣ ರಹಿತರಾಗಿದ್ದಾರೆ ಎಂದು ಸೆರೊ ಸಮೀಕ್ಷೆ ತಿಳಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ದೆಹಲಿ ಸರ್ಕಾರದ ಸಹಯೋಗದೊಂದಿಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಈ ಅಧ್ಯಯನವನ್ನು ಮಾಡಿದೆ. 2020ರ ಜೂನ್ 27 ರಿಂದ 2020ರ ಜುಲೈ 10ರವರೆಗೆ ದೆಹಲಿಯ 11 ಜಿಲ್ಲೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರಯೋಗಾಲಯದ ಮೂಲಗಳ ಪ್ರಕಾರ ಒಟ್ಟು 21,387 ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಸೆರೊ ಸಮೀಕ್ಷೆಯಲ್ಲಿ ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಕೈಗೊಂಡ ಪೂರ್ವಭಾವಿ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಕಂಟೋನ್ಮೆಂಟ್ ಜೋನ್ ಗಳಲ್ಲಿ ಕಠಿಣ ಕ್ರಮಗಳು ಮುಂದುವರೆಯಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

‘ಕರ್ನಾಟಕ ಇನ್ನು ಸಂಪೂರ್ಣ ಲಾಕ್​ಡೌನ್​ ಫ್ರೀ ರಾಜ್ಯ: ಇನ್ಮುಂದೆ ಎಲ್ಲೂ, ಎಂದೂ ಲಾಕ್​ಡೌನ್​ ಇಲ್ಲ: ಯಡಿಯೂರಪ್ಪ

ಮೂರು ವಾರಗಳ ಮುನ್ನ ಪ್ರತಿದಿನ ಮೂರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈಗ ಸಾವಿರದ ಆಸುಪಾಸಿನಲ್ಲಿವೆ. ದೆಹಲಿಯಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದ ಬಗ್ಗೆ ಮಂಗಳವಾರ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಾಹಿತಿ ನೀಡಿದ್ದಾರೆ.

ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವ ಸತ್ಯೇಂದ್ರ ಜೈನ್, ಸದ್ಯ ಚೇತರಿಸಿಕೊಂಡು ವರ್ಕ್ ಫ್ರಂ ಹೋಂ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ದೆಹಲಿಯಲ್ಲಿ ಮಂಗಳವಾರ 1,349 ಪ್ರಕರಣಗಳು ಪತ್ತೆಯಾಗಿದ್ದು, ದೆಹಲಿಯ ಕೊರೊನಾ ಪೀಡಿತರ ಸಂಖ್ಯೆ 1,25,096ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ಮಂಗಳವಾರ 29 ಜನ ಕೊರೋನಾಗೆ ಬಲಿಯಾಗಿದ್ದು, ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,690ಕ್ಕೆ ಏರಿಕೆಯಾಗಿದೆ.‌ 1,25,096 ಜನರ ಪೈಕಿ 1,06,118 ಜನ‌ ಕೊರೊನಾದಿಂದ ಗುಣಮುಖರಾಗಿದ್ದಾರೆ.‌ ಇನ್ನು ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ ಕೇವಲ 15,288 ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ.

Comments are closed.