ದೇಶದಲ್ಲಿ ಸಿಮ್ ಕಾರ್ಡ್ ಮೂಲಕ ಅನೇಕ ವಂಚನೆಗಳು ನಡೆಯುತ್ತಿದೆ. ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿತದೃಷ್ಠಿಯಿಂದ ಸಿಮ್ ಕಾರ್ಡ್ ವೆರಿಫಿಕೇಶನ್ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಪ್ರತಿ 6 ತಿಂಗಳಿಗೊಮ್ಮೆ ಸಿಮ್ ಕಾರ್ಡ್ ವೆರಿಫಿಕೇಶನ್ ಮಾಡಲಾಗುತ್ತದೆ ಎಂದು ಭಾರತೀಯ ದೂರಸಂಪರ್ಕ ಇಲಾಖೆ ಹೇಳಿದೆ.
ಹೊಸ ನಿಯಮದ ಪ್ರಕಾರ, ಸಿಮ್ ಕಾರ್ಡ್ ಮೂಲಕ ಟೆಲಿಕಾಂ ಕಂಪನಿಗೆ ಹೊಸ ಸಂಪರ್ಕವನ್ನು ನೀಡುವ ಮೊದಲು ನೋಂದಣಿಯನ್ನು ಪರಿಶೀಲಿಸಬೇಕಾಗುತ್ತದೆ. ಮತ್ತು 6 ತಿಂಗಳಿಗೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಹೇಳಿದೆ. ಕಂಪನಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ವಂಚನೆಗಳು ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಕಾರ್ಪೋರೇಟ್ ವ್ಯವಹಾರ ಸವಚಿವಾಲಯ ಕಂಪನಿಗಳು ಸಿಮ್ ನೊಂದಣಿಯನ್ನು ಪರಿಶೀಲಿಸಬೇಕಾಗಿದೆ. ಈ ಮೊದಲು ಸಿಮ್ ಕಾರ್ಡ್ ಚಂದಾದಾರರ ಪರಿಶೀಲನೆ ದಂಡದ ನಿಯಮವನ್ನು ಸಡಿಲಿಸಲು ಟೆಲಿಕಾಂ ಇಲಾಖೆ ನಿರ್ಧರಿಸಿತ್ತು. ಪ್ರತಿ ಸಣ್ಣ ತಪ್ಪಿಗೆ ಭಾರತೀಯ ಟೆಲಿಕಾಂ ಕಂಪನಿಗಳಿಗೆ 1 ಲಕ್ಷ ರೂ.ಗಳ ದಂಡ ವಿಧಿಸಲಾಗುವುದಿಲ್ಲ ಎಂದು ಹೇಳಿತ್ತು. ಆದರೀಗ ಗ್ರಾಹಕರ ಸಿಮ್ ಕಾರ್ಡ್ ಪರಿಶೀಲನೆ ನಿಯಮವನ್ನು ಪಾಲಿಸದ ಕಾರಣ ಟೆಲಿಕಾಂ ಕಂಪನಿಗಳಿಗೆ ಸರ್ಕಾರ 3 ಸಾವಿರ ಕೋಟಿ ದಂಡವನ್ನು ವಿಧಿಸಿದೆ.
Comments are closed.