ನವದೆಹಲಿ: ಭಾರತ ಕೃಷಿ ಆಧಾರಿತ ದೇಶ. ನಮ್ಮ ದೇಶದಲ್ಲಿ ಕೃಷಿಯ 80 ಪ್ರತಿಶತಕ್ಕಿಂತಲೂ ಹೆಚ್ಚು ಹವಾಮಾನ ಆಧಾರಿತವಾಗಿದೆ. ಹವಾಮಾನ ಉತ್ತಮವಾಗಿದ್ದರೆ ರೈತರು (Farmers) ನೆಮ್ಮದಿಯಿಂದ ಇರುತ್ತಾರೆ. ಇಲ್ಲದಿದ್ದರೆ ಇಡೀ ವರ್ಷ ರೈತರು ಪಟ್ಟ ಕಷ್ಟಕ್ಕೆ ಯಾವುದೇ ಪ್ರತಿಫಲವಿಲ್ಲದೆ ಅವರ ಜೀವನ ಕಷ್ಟಕರವಾಗುತ್ತದೆ. ಹವಾಮಾನ ಕೂಡ ಒಂದು ಕಡೆ ಬರ, ಮತ್ತೊಂದೆಡೆ ಪ್ರವಾಹ ಹೀಗೆ ನಿಖರವಾದ ಹವಾಮಾನ ಮಾಹಿತಿಯ ಕೊರತೆಯಿಂದಾಗಿ ಪ್ರತಿವರ್ಷ ರೈತರು ಭಾರಿ ನಷ್ಟವನ್ನು ಅನುಭವಿಸುತ್ತಾರೆ. ಅಷ್ಟೇ ಅಲ್ಲ ಮಿಂಚಿನಿಂದ ಪ್ರತಿವರ್ಷ ನೂರಾರು ರೈತರು ಪ್ರಾಣ ಕಳೆದುಕೊಳ್ಳುತ್ತಾರೆ.
ಭಾರತೀಯ ವಿಜ್ಞಾನ ಸಚಿವಾಲಯದ ಪುಣೆ (ಐಐಟಿಎಂ-ಪುಣೆ) ಯ ಭಾರತೀಯ ವಿಜ್ಞಾನ ಸಂಸ್ಥೆ ‘ದಾಮಿನಿ ಮಿಂಚಿನ ಅಪ್ಲಿಕೇಶನ್’ ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಪ್ರತಿ ಕ್ಷಣವೂ ಹವಾಮಾನದ ಬಗ್ಗೆ ರೈತನಿಗೆ ಮಾಹಿತಿಯನ್ನು ನೀಡುತ್ತದೆ. ಜೊತೆಗೆ ರೈತರನ್ನು ಮಿಂಚಿನ ಬಗ್ಗೆ ಎಚ್ಚರಿಸುತ್ತದೆ. ಮಿಂಚಿನ ಎಚ್ಚರಿಕೆಯನ್ನು ಪಡೆದಾಗ ಹೊಲಗಳಲ್ಲಿ ಕೆಲಸ ಮಾಡುವ ರೈತರು ಸಮಯಕ್ಕೆ ಸುರಕ್ಷಿತ ಸ್ಥಳಕ್ಕೆ ತೆರಳಬಹುದು.
ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ-ಎನ್‌ಡಿಆರ್‌ಐನ ಕೃಷಿ ವಿಜ್ಞಾನ ಕೇಂದ್ರದ ಉಸ್ತುವಾರಿ ಡಾ.ರಾಕೇಶ್ ಕುಮಾರ್ ಮಾತನಾಡಿ ಮಿಂಚು ನೈಸರ್ಗಿಕ ವಿಪತ್ತು ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಜಾಗೃತಿ ಅಭಿಯಾನದ ಮೂಲಕ ಜನರನ್ನು ಉಳಿಸಬೇಕು ಮತ್ತು ಅವರ ಜೀವ ಉಳಿಸಬೇಕು. ಮಿಂಚಿನ ಘಟನೆಗಳಿಂದ ರೈತರಿಗೆ ದಾಮಿನಿ ಅಪ್ಲಿಕೇಶನ್ (Damini app) ಸಹಾಯ ಮಾಡುತ್ತದೆ.
ಕೃಷಿಕ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ಘಟಕದ ವಿಷಯ ತಜ್ಞ ಡಾ.ಯೋಗೇಶ್ ಕುಮಾರ್, ಮಿಂಚು ಪ್ರತಿಕೂಲ ಹವಾಮಾನದ ಸಮಯದಲ್ಲಿ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರೈತರು ಈ ಆ್ಯಪ್ ಅನ್ನು ಬಳಸಬೇಕು ಎಂದು ಹೇಳಿದರು.
Comments are closed.