ರಾಷ್ಟ್ರೀಯ

ಭಾರತೀಯರಿಗೆ 20 ಸಾವಿರ ರೂ.ಗೆ ಈ ಎಲೆಕ್ಟ್ರಿಕ್​ ಬೈಕ್​!

Pinterest LinkedIn Tumblr


ಭಾರತ ಎಲೆಕ್ಟ್ರಿಕ್​ ವಾಹನಗಳ ಉತ್ಪಾದನೆಯತ್ತ ತೊಡಗಿಸಿಕೊಂಡಿದೆ. ಈಗಾಗಲೇ ಅನೇಕ ಕಂಪೆನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಅದರಂತೆ ಡೆಟೆಲ್​ ಸಂಸ್ಥೆ ಈಸಿ ಹೆಸರಿನ ಎಲೆಕ್ಟ್ರಿಕ್​ ಬೈಕ್​ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಡೆಟೆಲ್​ ಕಂಪನಿ ಗ್ರಾಹಕರಿಗೆ ಕೈಗೆಟಕುವ ಬೆಲೆಗೆ ಈ ಬೈಕ್​ ಅನ್ನು ಬಿಡುಗಡೆ ಮಾಡಿದ್ದು, 19,999 ರೂ.ಗೆ ಖರೀದಿಸಿಗೆ ಸಿಗಲಿದೆ. ಮೂರು ಬಣ್ಣದಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ.

ಡೆಟೆಲ್​​ ಈಸಿ ಬೈಕ್​​ ಜೆಟ್​ ಬ್ಲ್ಯಾಕ್​​, ಪರ್ಲ್​ ವೈಟ್​​ ಮತ್ತು ಮೆಟಾಲಿಕ್​​​ ರೆಡ್​​ ಬಣ್ಣದಲ್ಲಿ ಪರಿಚಯಿಸಿದೆ. ನೂತನ ಬೈಕ್​ ಅನ್ನು india.com ಮತ್ತು b2badda.comನಲ್ಲಿ ಮಾರಾಟ ಮಾಡುತ್ತಿದೆ. ಗ್ರಾಹಕರಿಗೆ ಇಎಂಐ ಮೂಲಕ ಖರೀದಿಸಲು ಡೆಟೆಲ್​ ಸಂಸ್ಥೆ ಬಜಾಜ್​ ಫಿನ್​ಸರ್ವ್​ನೊಂದಿಗೆ ಪಾಲುದಾರಿಕೆ ಹೊಂದಿದೆ.

ಡೆಟೆಲ್​ ಈಸಿ ಎಲೆಕ್ಟ್ರಿಕ್ ಬೈಕ್​ನಲ್ಲಿ 250ವ್ಯಾಟ್​​ ಮೋಟಾರ್​ ಅಳವಡಿಸಲಾಗಿದ್ದು, ಗಂಟೆಗೆ 25 ಕಿಲೋ ಮೀಟರ್​ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ನೂತನ ಎಲೆಕ್ಟ್ರಿಕ್​ ಬೈಕ್​ನಲ್ಲಿ 48ವಿ 12ಎಎಚ್​​ ಲೈಫ್​​ಪಿ04 ಬ್ಯಾಟರಿಯನ್ನು ಹೊಂದಿದೆ. ಚಾರ್ಜ್ ಪೂರ್ತಿಯಾಗಲು 7ರಿಂದ 8 ಗಂಟೆಯ ಅವಧಿಯನ್ನು ತೆಗೆದುಕೊಳ್ಳಲಿದೆ ಎಂದು ಕಂಪೆನಿ ಹೇಳಿದೆ. ಅಂತೆಯೇ ಒಂದು ಬಾರಿ ಚಾರ್ಜ್​ ಮಾಡಿದರೆ 60 ಕಿ.ಮೀ ವರೆಗೆ ಚಲಿಸಬಹುದಾಗಿದೆ.

ಇನ್ನು ಸುಧಾರಿತ ಡ್ರಮ್​ ಬ್ರೇಕ್​ ಸಿಸ್ಟಂ ಇದರಲ್ಲಿ ನೀಡಲಾಗಿದೆ. ಎರಡು ಜನರು ಕುಳಿತುಕೊಳ್ಳಬಹುದಾಗಿದೆ. ಈ ಬೈಕ್​ ಖರೀದಿಸುವವರಿಗೆ ಕಂಪೆನಿ ಉಚಿತ ಹೆಲ್ಮೆಟ್​​ ಕೂಡ ನೀಡಲಿದೆ.

ಡೆಟೆಲ್​ ಕಂಪೆನಿಯ ಸಿಇಒ ಯೋಗೇಶ್​ ಭಾಟಿಯಾ ಈ ಬಗ್ಗೆ ಮಾತನಾಡಿ, ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ಡೆಟೆಲ್ ಈಸಿ ಬೈಕ್​​ ಸಹಾಯಕವಾಗಲಿದೆ. ಎಲೆಕ್ಟ್ರಿಕ್​ ವಾಹನಗಳ ಬಳಕೆ ಹೆಚ್ಚಾಗುತ್ತಿದೆ ಎಂದರು.

Comments are closed.