ರಾಷ್ಟ್ರೀಯ

ಜಮ್ಮು-ಕಾಶ್ಮೀರ: ರಾಜ್ಯ ಸ್ಥಾನಮಾನಕ್ಕಾಗಿ ಮೈತ್ರಿಗೆ ಮುಂದಾದ 6 ರಾಜಕೀಯ ಪಕ್ಷಗಳು!

Pinterest LinkedIn Tumblr


ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು-ಕಾಶ್ಮೀರದ ಆರು ಪಕ್ಷಗಳು ಮೈತ್ರಿಗೆ ಮುಂದಾಗಿವೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿ ಸಿಗುವಂತೆ ಮಾಡುವುದು ಹಾಗೂ ರಾಜ್ಯ ಸ್ಥಾನಮಾನವನ್ನು ಮರಳಿ ನೀಡುವಂತೆ ಆಗ್ರಹಿಸುವುದು ಈ ಮೈತ್ರಿಯ ಹಿಂದಿನ ಉದ್ದೇಶವಾಗಿದೆ.

ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಪಿಡಿಪಿ, ಪೀಪಲ್ಸ್ ಕಾನ್ಫರೆನ್ಸ್, ಸಿಪಿಎಂ, ಅವಾಮಿ ನ್ಯಾಷನಲ್ ಕಾನ್ಫರೆನ್ಸ್ (ಎಎನ್ ಸಿ) ಮೈತ್ರಿ ಮಾಡಿಕೊಂಡಿದ್ದು, 2019, ಆ.04 ರ ಗುಪ್ಕರ್ ಡಿಕ್ಲೆರೇಷನ್ ಗೆ ಬದ್ಧವಾಗಿ, ಆರ್ಟಿಕಲ್ 370 ಮರು ಸ್ಥಾಪನೆ, ಹಾಗೂ ರಾಜ್ಯಸ್ಥಾನಮಾನ ಮರಳಿ ತರುವುದಕ್ಕೆ ಹೋರಾಡುವುದಾಗಿ ಜಂಟಿ ಪತ್ರಿಕಾ ಹೇಳಿಕೆಯ ಮೂಲಕ 6 ಪಕ್ಷಗಳು ತಿಳಿಸಿವೆ.

ಜಂಟಿ ಹೇಳಿಕೆಯಲ್ಲಿ ಆ.05 ರ ಆರ್ಟಿಕಲ್ 370 ರದ್ದತಿ ಹಾಗೂ ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಕ್ರಮ ದುರದೃಷ್ಟಕರ ಎಂದು ಹೇಳಿವೆ.

Comments are closed.