ರಾಷ್ಟ್ರೀಯ

ನಿತ್ಯಾನಂದನ ಕೈಲಾಸದಲ್ಲಿ ಹಿಂದು ಸಂಸತ್ ಸ್ಥಾಪನೆ!

Pinterest LinkedIn Tumblr


ನವದೆಹಲಿ: ಕೈಲಾಸ ಎಂಬ ಸ್ವಂತ ದ್ವೀಪವನ್ನು ಘೊಷಿಸಿ ಅಲ್ಲಿನ ಕರೆನ್ಸಿ ಬಿಡುಗಡೆ ಮಾಡಿ, ರಿಸರ್ವ್ ಬ್ಯಾಂಕ್ ಆಫ್ ಕೈಲಾಸವನ್ನೂ ಸ್ಥಾಪಿಸಿರುವ ವಿವಾದಾತ್ಮಕ ದೇವಮಾನವ ನಿತ್ಯಾನಂದಸ್ವಾಮಿ ಮುಂದಿನ 6 ತಿಂಗಳಿನಲ್ಲಿ ಹಿಂದು ಸಂಸತ್ ರಚಿಸುವುದಾಗಿ ತಿಳಿಸಿದ್ದಾರೆ.

ಹಿಂದು ಧರ್ಮ ಆಧಾರಿತ ಸಂಸ್ಥೆಗಳನ್ನು ನಿರ್ವಹಿಸಲು ಮಾದರಿ ಸರ್ಕಾರದ ಸ್ಥಾಪನೆಗಾಗಿ ಹಿಂದು ಸಂಸತ್ ರಚಿಸಲು ಬಯಸಿದ್ದೇವೆ. 2021ರ ಜನವರಿ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನಿತ್ಯಾನಂದ ತಿಳಿಸಿದ್ದಾರೆ ಎಂಬ ವಿಡಿಯೋ ಸಂದೇಶವನ್ನು ಆಧರಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಸಂಸತ್ ವೇದ ಮತ್ತು ಆಗಮಗಳಲ್ಲಿ ಹೇಳಿರುವುದಕ್ಕೆ ಅನುಗುಣವಾಗಿ ಚಿತ್ ಸಭೆ, ರಾಜಸಭೆ, ದೇವಸಭೆ, ಕನಗಾಸಭೆ ಮತ್ತು ನಿತ್ಯಾನಂದ ಸಭೆ ಎಂಬ ಐದು ಘಟಕಗಳನ್ನು ಹೊಂದಿರುತ್ತದೆ. ಚಿತ್ ಸಭೆ ಪ್ರಜ್ಞೆ ಆಧಾರಿತ ಆಧ್ಯಾತ್ಮಿಕ ಜ್ಞಾನೋದಯ ವಿಜ್ಞಾನವನ್ನು ಪ್ರಸ್ತುತಪಡಿಸುತ್ತದೆ. ಇದಕ್ಕೆ ಎಲ್ಲ ಹಿಂದು ಪ್ರತಿನಿಧಿಗಳು, ಪ್ರಬುದ್ಧರು, ಮಠಾಧೀಶರು, ಗುರುಗಳಿಗೆ ಸ್ವಾಗತಿಸುತ್ತೇವೆ. ರಾಜಸಭೆ ಜವಾಬ್ದಾರಿಯುತ ಪ್ರಜಾಪ್ರಭುತ್ವವಾಗಿದ್ದು, ಇದಕ್ಕೆ ಹಿಂದು ತತ್ವಗಳನ್ನು ಮೆಚ್ಚುವ ರಾಜಕೀಯ ಮುಖಂಡರನ್ನು ಆಹ್ವಾನಿಸುತ್ತೇವೆ. ಪ್ರತಿ ಸಭೆಯು 1,008 ಸದಸ್ಯರ ಬಲ ಹೊಂದಿರುತ್ತದೆ. ಸದಸ್ಯತ್ವ ಅಧಿಕಾರಾವಧಿ ಮತ್ತು ಇತರ ವಿವರಗಳನ್ನು ನಿತ್ಯಾನಂದ ನಿರ್ಧರಿಸುತ್ತಾರೆ ಎಂದು ವಿಡಿಯೋದಲ್ಲಿ ತಿಳಿಸಿದೆ.

Comments are closed.