ರಾಷ್ಟ್ರೀಯ

ವಿಮಾನದಾಚೆ ಮಾನವ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್ ಗಳು​…!

Pinterest LinkedIn Tumblr
Pas

ನವದೆಹಲಿ: ವಿಮಾನಗಳು ಹಾರಾಡುವ ಎತ್ತರದಲ್ಲಿ ಮನುಷ್ಯನೊಬ್ಬ ತೇಲುತ್ತಿದ್ದರೆ ಹೇಗಿರುತ್ತೆ?… ಖಂಡಿತ ಪೈಲಟ್​ಗಳಿಗೆ ಶಾಕ್​ ಆಗುತ್ತೆ…!
ಸಿನಿಮಾಗಳಲ್ಲಷ್ಟೇ ಸಾಧ್ಯವಾಗುವ ಇಂಥದ್ದೊಂದು ವಿದ್ಯಮಾನ ಅಮೆರಿಕದ ಲಾಸ್​ ಎಂಜಲೀಸ್​ ನಗರದಲ್ಲಿ ಜರುಗಿದೆ.

ಲಾಸ್​ ಎಂಜಲೀಸ್​ ವಿಮಾನ ನಿಲ್ದಾಣದ ಆಗಸದಲ್ಲಿ ವ್ಯಕ್ತಿಯೊಬ್ಬ ಜೆಟ್​ಪ್ಯಾಕ್​ ಅಳವಡಿಸಿಕೊಂಡು 3,000 ಅಡಿ ಎತ್ತರದಲ್ಲಿ ಹಾರಾಡುತ್ತಿದುದಾಗಿ ಅಮೆರಿಕ ಏರ್​ಲೈನ್ಸ್​ ವಿಮಾನದ ಪೈಲಟ್​ಗಳು ಹೇಳಿದ್ದಾರೆ.

ಅದರಲ್ಲೂ ವಿಮಾನಕ್ಕೆ ಕೇವಲ 300 ಗಜಗಳಷ್ಟು ಸಮೀಪದಲ್ಲಿದ್ದ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಎರಡು ಬೇರೆ ಬೇರೆ ವಿಮಾನಗಳ ಪೈಲಟ್​ಗಳು ಜೆಟ್​ ಪ್ಯಾಕರ್​ನನ್ನು ನೋಡಿದ್ದಾರೆ.  ಭಾನುವಾರ ಸಂಜೆ 6.30ರಲ್ಲಿ ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಂತೆ ಲ್ಯಾಂಡಿಂಗ್​ಗೆ ಸಜ್ಜಾಗುತ್ತಿದ್ದಾಗ ಹಾರಾಡುತ್ತಿದ್ದ ವ್ಯಕ್ತಿಯನ್ನು ಗುರುತಿಸಿದ್ದಾಗಿ ಒಬ್ಬ ಪೈಲಟ್​ ಹೇಳಿದ್ದಾರೆ.

ನಾವು ಈಗಷ್ಟೇ ಜೆಟ್​ ಪ್ಯಾಕ್​ನಲ್ಲಿ ಹಾರಾಡುತ್ತಿದ್ದ ವ್ಯಕ್ತಿಯನ್ನು ದಾಟಿದ್ದೇವೆ ಎಂದು ಪೈಲಟ್​ ಹೇಳಿರುವುದು ವಿಮಾನ ಹಾರಾಟ ನಿಯಂತ್ರಣ ಕೇಂದ್ರದಲ್ಲಿ ದಾಖಲಾಗಿದೆ. ಆತ ವಿಮಾನದ ಎಡಭಾಗಕ್ಕೆ 300 ಗಜ ದೂರದಲ್ಲಿದ್ದ. ಈಗ ವಿಮಾನ 3000 ಅಡಿ ಎತ್ತರದಲ್ಲಿದೆ ಎಂದು ಪೈಲಟ್​ ಮಾಹಿತಿ ನೀಡಿದ್ದಾನೆ. ಇದಾಗುತ್ತಿದ್ದಂತೆ ವಿಮಾನ ಹಾರಾಟ ನಿಯಂತ್ರಣ ಕೇಂದ್ರದಿಂದ ಎಲ್ಲ ವಿಮಾನಗಳಿಗೂ ಮಾಹಿತಿ ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

 

Comments are closed.