ರಾಷ್ಟ್ರೀಯ

ಡೌನ್​ಲೋಡ್​ ಆಗದ ನೀಟ್​ ಹಾಲ್​ಟಿಕೆಟ್​; ಯುವತಿ ಆತ್ಮಹತ್ಯೆ

Pinterest LinkedIn Tumblr

ಪುದುಕೊಟ್ಟೈ: ನೀಟ್​ ಪರಿಕ್ಷಾರ್ಥಿಯಾಗಿದ್ದ 17ವರ್ಷದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನೀಟ್​ ಪರೀಕ್ಷೆ ಬರೆಯುವ ಸಿದ್ಧತೆಯಲ್ಲಿದ್ದ ಇವಳಿಗೆ ತನ್ನ ಹಾಲ್​ಟಿಕೆಟ್​ ಡೌನ್​ಲೋಡ್​ ಮಾಡಿಕೊಳ್ಳಲು ವಿಫಲವಾಗಿದ್ದಲ್ಲದೆ, ಇದೇ ವಿಚಾರಕ್ಕೆ ತಂದೆಯೊಂದಿಗೂ ಜಗಳವಾಡಿಕೊಂಡಿದ್ದಳು. ನಂತರ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದಿದ್ದು ತಮಿಳುನಾಡಿನ ಪುದುಕೊಟ್ಟೈನಲ್ಲಿ. ಆದರೆ ಹಾಲ್​ಟಿಕೆಟ್​ ಡೌನ್​ಲೋಡ್​ ಆಗದೆ ಇರಲು ಕಾರಣ ಯುವತಿಯೇ. ಆಕೆ ತನ್ನ ಅಪ್ಲಿಕೇಶನ್​ ನಂಬರ್​ ಮತ್ತು ಸೆಕ್ಯೂರಿಟಿ ಪಿನ್​​ ಸಂಖ್ಯೆಯನ್ನು ತಪ್ಪಾದ ಜಾಗದಲ್ಲಿ ನಮೂದಿಸಿದ್ದರಿಂದ ಹಾಲ್​ಟಿಕೆಟ್​ ಡೌನ್​ಲೋಡ್​ ಆಗಿರಲಿಲ್ಲ ಎಂದು ಹೇಳಿದ್ದಾರೆ.

ಯುವತಿಯ ಹೆಸರು ಹರಿಷ್ಮಾ. ಈಕೆಗೆ ತಾನು ವೈದ್ಯೆಯಾಗಬೇಕು ಎಂಬ ಕನಸಿತ್ತು. ದ್ವಿತೀಯ ಪಿಯು ಪರೀಕ್ಷೆಯಲ್ಲಿ 400 ಅಂಕ ಗಳಿಸಿದ್ದರಿಂದ ಆಕೆಯ ತಂದೆ ಇಂಜಿನಿಯರಿಂಗ್​ ಮಾಡುವಂತೆ ಹೇಳಿದ್ದರು. ಆದೆರ ಹರಿಷ್ಮಾ ಖಡಾಖಂಡಿತವಾಗಿ ನಿರಾಕರಿಸಿದ್ದಳು. ನಾನು ಮೊದಲು ನೀಟ್​ ಪರೀಕ್ಷೆ ಬರೆದು, ಉತ್ತೀರ್ಣಳಾಗಬೇಕು ಎಂದಿದ್ದಳು.

ಆದರೆ ನೀಟ್​ ಅಡ್ಮಿಟ್​ ಕಾರ್ಡ್​ ಡೌನ್ಲೋಡ್​ ಮಾಡಿಕೊಳ್ಳಲು ಮರೆತೇಹೋಗಿದ್ದಳು. ಅದನ್ನೂ ತಂದೆಯೇ ನೆನಪು ಮಾಡಿದ್ದರು. ಆದರೆ ಹರಿಷ್ಮಾಗೆ ಇನ್ನೊಂದು ಸಮಸ್ಯೆಯಾಗಿತ್ತು. ತಾನು ಸಲ್ಲಿಸಿದ್ದ ಅರ್ಜಿ ನಂಬರ್​ ಕೂಡ ಅವಳು ಮರೆತಿದ್ದಳು. ಅವಳ ತಂದೆ ಗಣೇಶನ್​, ನಾವು ವಿದ್ಯಾಲಯಕ್ಕೇ ಹೋಗಿ ಅಡ್ಮಿಟ್​ ಕಾರ್ಡ್​ ಪಡೆಯೋಣ ಎಂದು ಹೇಳಿದರೂ, ಮಗಳ ಮೇಲೆ ಕೂಗಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಅರ್ಜಿ ಸಂಖ್ಯೆ ಪಡೆಯಲು ವಿದ್ಯಾಲಯಕ್ಕೆ ಹೋದರೆ ಅಲ್ಲಿ ಶಿಕ್ಷಕರು ಇರಲಿಲ್ಲ. ಹಾಗಾಗಿ ಮನೆಗೆ ವಾಪಸ್​ ಬಂದನಂತರ ತಂದೆ ಗಣೇಶನ್​ ಮತ್ತೆ ಮಗಳ ಮೇಲೆ ಕೋಪದಿಂದ ಕೂಗಾಡಿದ್ದಾರೆ.

ಇದೆಲ್ಲದರಿಂದ ಬೇಸತ್ತ ಹರಿಷ್ಮಾ ಕೀಟನಾಶಕ ಸೇವಿಸಿದ್ದಾಳೆ. ಆಕೆಯ ತಂದೆ ರೈತರಾಗಿದ್ದು, ಬೆಳೆಗಳಿಗೆ ಬೇಕೆಂದು ತಂದಿಟ್ಟಿದ್ದರು. ಅದನ್ನೇ ಕುಡಿದು ಮೃತಪಟ್ಟಿದ್ದಾಳೆ. ನೋವಿನ ಮಡುವಿನಲ್ಲಿದ್ದ ಮಗಳನ್ನು ಪಾಲಕರು ಆಸ್ಪತ್ರೆಗೆ ದಾಖಲಿಸಿದ್ದರೂ ಅವಳು ಬದುಕುಳಿಯಲಿಲ್ಲ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ ಎಂದು ಅಲಾಂಗುಡಿ ಡಿಎಸ್​ಪಿ ಮಥುರಾಜಾ ತಿಳಿಸಿದ್ದಾರೆ.

 

Comments are closed.