ತಿರುವನಂತಪುರ: ಕೇರಳದಲ್ಲಿ ಯುವಕನೊಬ್ಬ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ವಿಡಿಯೋ ಒಂದು
ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ವೀಡಿಯೋದ ಅಸಲಿಯತ್ತು ಇದೀಗ ಬಹಿರಂಗವಾಗಿದೆ.
ಕೇರಳದಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದು, ಅವರ ಮೇಲೆ ಇಂತಹ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಈ ವಿಡಿಯೋವನ್ನು ಮುಂದಿಟ್ಟು ಹೇಳಲಾಗಿತ್ತು. ಅಸಲಿಗೆ ವೈರಲ್ ಆಗಿದ್ದ ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹುಡುಗಿಯನ್ನು ವಿವಸ್ತ್ರಗೊಳಿಸಿ ಆಕೆಯ ಮೇಲೆ ದೈಹಿಕ-ಲೈಂಗಿಕ ಹಲ್ಲೆಗೆ ಮುಂದಾಗುತ್ತಾನೆ. ಆಕೆ, ತನ್ನನ್ನು ಬಿಟ್ಟುಬಿಡುವಂತೆ ಎಷ್ಟೇ ಬೇಡಿಕೊಂಡರೂ, ಕಿರುಚಿದರೂ ಸಹ ಆತ ಅದನ್ನು ಗಮನಿಸಿದೆ ಆಕೆಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ಮುಂದುವರೆಸುತ್ತಾನೆ. ಇದೇ ವೇಳೆ ಮತ್ತೋರ್ವ ಯುವತಿ ಆಕೆಯ ರಕ್ಷಣೆಗೆ ಮುಂದಾಗುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೆ, ಈ ಮೂವರ ಧ್ವನಿಯನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಬಹುದಾಗಿದೆ.
ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಇಂಡಿಯಾ ಟುಡೆ ಸುಳ್ಳು ಸುದ್ದಿ ಪತ್ತೆ) ಈ ವಿಡಿಯೋ ಅಸಲಿ ಕಥೆಯನ್ನು ಹೊರಗೆಡವಿದ್ದು, ಸತ್ಯವನ್ನು ಬಯಲು ಮಾಡಿದೆ. ಅಸಲಿಗೆ ಇದು ಕೇರಳದಲ್ಲಿ ನಡೆದ ಘಟನೆಯೇ ಅಲ್ಲ. ಬದಲಾಗಿ ಇದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದೆ ನಡೆದಿರುವ ಘಟನೆಯಾಗಿದ್ದು, ಸ್ವತಃ ಹುಡುಗಿಯ ಸ್ನೇಹಿತನೇ ಆತನ ಸ್ನೇಹಿತರ ಜೊತೆಗೂಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಅಂಶವನ್ನು ಪತ್ತೆ ಮಾಡಿದೆ.
ಸೆಪ್ಟೆಂಬರ್ 07 ರಂದು ಈ ವಿಡಿಯೋವನ್ನು ಟ್ವಿಟ್ ಮೂಲಕ ಹಂಚಿಕೊಂಡಿದ್ದ ವ್ಯಕ್ತಿಯೊಬ್ಬರು, “ಇದು ಕೇರಳದ ಮಹಿಳೆಯೊಬ್ಬಳ ಕಿರುಕುಳವನ್ನು ತೋರಿಸುವ ಏಕೈಕ ವೈರಲ್ ವಿಡಿಯೋ ಅಲ್ಲ. ಇಂತಹ ಘಟನೆಗಳು ಅಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಉದ್ದೇಶವೆಂದರೆ ಹಿಂದೂಗಳು ಆ ರಾಜ್ಯದಲ್ಲಿ ಅಲ್ಪಸಂಖ್ಯಾತರು” ಎಂದು ಶೀರ್ಷಿಕೆ ನೀಡಿದ್ದರು.
ಈ ಟ್ವೀಟ್ ಅನ್ನು ಅಳಿಸಲಾಗಿತ್ತಾದರೂ ಅಷ್ಟೊತ್ತಿಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕೂಡ ಇದನ್ನು ರಿಟ್ವೀಟ್ ಮಾಡಿದ್ದು, ಈ ವಿಷಯವನ್ನು ಕೈಗೆತ್ತಿಕೊಳ್ಳಲು ರಾಷ್ಟ್ರೀಯ ಮಹಿಳಾ ಆಯೋಗವನ್ನು ಕೋರಿದ್ದರು.
ಇನ್ವಿಡ್ ಬಳಸಿ ಈ ವಿಡಿಯೋ ಕೀಫ್ರೇಮ್ಗಳಲ್ಲಿ ಒಂದರ ಮೂಲವನ್ನು ಪತ್ತೆ ಹಚ್ಚಲು ನಾವು ಹಿಮ್ಮುಖವಾಗಿ ಚಲಿಸಿದ್ದಾಗ ಈ ಘಟನೆಯ ಸತ್ಯಾಸತ್ಯತೆ ಬಯಲಾಗಿದೆ. ಈ ಘಟನೆಯ ಕುರಿತು “ದಿ ಟೈಮ್ಸ್ ಆಫ್ ಇಂಡಿಯಾ” ವರದಿಯನ್ನೂ ನಾವು ಶೋಧಿಸಿದ್ದೇವೆ. ಈ ವರದಿಯ ಪ್ರಕಾರ 2017ರ ಆಗಸ್ಟ್‌ನಲ್ಲಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆದರೆ, ಈ ವಿಡಿಯೋ ಈಗ ವೈರಲ್ ಆಗುತ್ತಿದೆ ಎಂಬುದು ತಿಳಿದುಬಂದಿದೆ.
“ದಿ ಹಿಂದೂ” ವರದಿಯ ಪ್ರಕಾರ, ಯುವತಿಗೆ 19 ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ. ಆಗಸ್ಟ್ 29, 2017 ರಂದು ತನ್ನ ಗೆಳೆಯ ಸಾಯಿಯಿಂದ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ವಿದ್ಯಾರ್ಥಿಯು ಯುವಕನ ಪ್ರೀತಿ ನಿರಾಕರಿಸಿದ್ದಕ್ಕೆ ಈ ಕೃತ್ಯ ನಡೆದಿದೆ.
Comments are closed.