ಸೆಪ್ಟಂಬರ್ 12ರಿಂದ 80 ಹೊಸ ರೈಲುಗಳು ಸಂಚಾರ ಆರಂಭಿಸಲಿವೆ. ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಶುರುವಾಗಿದ್ದು, ಇವುಗಳ ಜೊತೆಗೆ ಚಾಲನೆಯಲ್ಲಿರುವ 230 ವಿಶೇಷ ರೈಲುಗಳು ಜೊತೆಗಿರಲಿವೆ.
ಇವು ಸಂಪೂರ್ಣವಾಗಿ ಕಾಯ್ದಿರಿಸಿದ ರೈಲುಗಳಾಗಿದ್ದು, ಈ ಹೊಸ 80 ರೈಲುಗಳು ಈಗಾಗಲೇ ಚಾಲನೆಯಲ್ಲಿರುವ 230 ವಿಶೇಷ ರೈಲುಗಳ ಜೊತೆಗೆ ಇರಲಿವೆ ಎಂದು ಇತ್ತೀಚೆಗೆ ಭಾರತೀಯ ರೈಲ್ವೆಯ ಮೊದಲ ಸಿಇಒ ಆಗಿ ನೇಮಕಗೊಂಡಿರುವ ಯಾದವ್ ತಿಳಿಸಿದ್ದಾರೆ.
ಈ ರೈಲುಗಳ ಸಮಯವು ಸಾಮಾನ್ಯ ರೈಲುಗಳಂತೆಯೇ ಇರಲಿದ್ದು, ಈ ಹೊಸ ರೈಲುಗಳಲ್ಲಿ ದೆಹಲಿ-ಇಂದೋರ್, ಯಸ್ವಂತ್ಪುರ್-ಗೋರಖ್ಪುರ್, ಪುರಿ-ಅಹಮದಾಬಾದ್, ನವದೆಹಲಿ-ಬೆಂಗಳೂರು ಮಾರ್ಗಗಳು ಸೇರಿವೆ. ಅದ್ರಂತೆ, ಶನಿವಾರದಿಂದ ಈ ರೈಲುಗಳು ಸಂಚರಿಸಲಿವೆ.
Comments are closed.