ರಾಷ್ಟ್ರೀಯ

ಕ್ವಾರಂಟೈನ್‌ ಕೇಂದ್ರದಲ್ಲಿ ಅಟೆಂಡೆಂಟ್‌ ನಿಂದ ಮಹಿಳೆಯ ಮೇಲೆ ಅತ್ಯಾಚಾರ

Pinterest LinkedIn Tumblr


ಥಾಣೆ( ಮಹಾರಾಷ್ಟ್ರ): ಇಲ್ಲಿನ ಕೊರೋನಾ ಕ್ವಾರಂಟೈನ್‌ ಕೇಂದ್ರದಲ್ಲಿ ಮಹಿಳೆಯ ಮೇಲೆ ಟೆಂಡೆಂಟ್‌ ಅತ್ಯಾಚಾರ ಎಸಗಿದ ಘಟನೆ ವರದಿಯಾಗಿದೆ. .

ಈ ಘಟನೆ ಜೂನ್‌ನಲ್ಲಿ ನಡೆದಿದ್ದು, ಶನಿವಾರ 20ರ ಹರೆಯದ ಮಹಿಳೆ ಪೊಲೀಸ್‌ ದೂರು ನೀಡಿದಾಗ ಇದು ಬೆಳಕಿಗೆ ಬಂದಿದೆ ಎಂದು ನವಘರ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಸಂಪತ್‌ ಪಾಟೀಲ್‌ ಹೇಳಿದ್ದಾರೆ.

ಇಲ್ಲಿನ ಮೀರಾ ರೋಡ್‌ ಪ್ರದೇಶದಲ್ಲಿರುವ ಕ್ವಾರಂಟೈನ್‌ ಕೇಂದ್ರದಲ್ಲಿ ತನ್ನ 11ರ ಹರೆಯದ ಸಂಬಂಧಿಯ ಜತೆಗೆ ಅಲ್ಲಿ ಉಳಿದುಕೊಂಡಿದ್ದಾಗ ಆರೋಪಿ ಈ ಅಪರಾಧ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಕೋವಿಡ್ ವೈರಸ್ ಪಾಸಿಟಿವ್‌ ಕಂಡುಬಂದಿದ್ದ ಸಂಬಂಧಿಯನ್ನು ನೋಡಿಕೊಳ್ಳಲು ಮಹಿಳೆ ತನ್ನ 10 ತಿಂಗಳ ಮಗಳ ಜತೆಗೆ ಕೇಂದ್ರದಲ್ಲಿ ತಂಗಿದ್ದಳು. ಬಿಸಿನೀರು ನೀಡುವ ನೆಪದಲ್ಲಿ ಆರೋಪಿಯು ರಾತ್ರಿ ಕೋಣೆಗೆ ಭೇಟಿ ನೀಡುತ್ತಿದ್ದನು. ಇದೇ ವೇಳೆ ಆರೋಪಿಯು ಮಹಿಳೆಗೆ ಆಕೆಯ ಮಗುವನ್ನು ಕೊಲ್ಲುವ ಬೆದರಿಕೆ ಹಾಕಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಜೂನ್‌ ಮೊದಲ ವಾರದಲ್ಲಿ ಆರೋಪಿಯು ಕೋಣೆಯಲ್ಲಿ ಮಹಿಳೆಯ ಮೇಲೆ ಮೂರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿ ತನ್ನ ಕುಟುಂಬ ಸದಸ್ಯರಿಗೆ ಹಾನಿ ಮಾಡಬಹುದೆಂಬ ಭಯದಿಂದಾಗಿ ಮಹಿಳೆ ಆ ಸಮಯದಲ್ಲಿ ಪೊಲೀಸರನ್ನು ಸಂಪರ್ಕಿಸಲಿಲ್ಲ ಎಂದು ಪಾಟೀಲ್‌ ಹೇಳಿದ್ದಾರೆ.

Comments are closed.