ಗುವಾಹಟಿ: ಅಸ್ಸಾಂ ನಲ್ಲಿ ಕೊರೋನಾದೊಂದಿಗೆ ಮಾರಾಣಾಂತಿಕ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿರುವುದು ವರದಿಯಾಗಿದ್ದು, ಹಂದಿ ಜ್ವರ ಹರಡಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಈ ಹಿನ್ನಲೆ ಸೋಂಕಿತ ಪ್ರದೇಶದ 12 ಸಾವಿರ ಹಂದಿಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ತಿಳಿಸಿದ್ದಾರೆ.
ಮುಖ್ಯಮಂತ್ರಿಯು ಹಂದಿ ಮಾಲೀಕರಿಗೆ ಪರಿಹಾರ ನೀಡುವ ಭರವಸೆಯನ್ನು ಕೂಡ ನೀಡಿದ್ದಾರೆ. ಇದುವರೆಗೆ 18 ಸಾವಿರ ಹಂದಿಗಳು ಈ ಸೋಂಕಿನಿಂದ ಸಾವನ್ನಪ್ಪಿವೆ. ರಾಜ್ಯದ 14 ಜಿಲ್ಲೆಯಲ್ಲಿ ಈ ಸೋಂಕು ಹರಡಿದೆ ಎಂದು ಪಶು ಸಂಗೋಪನಾ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ದಸರೆಯ ದುರ್ಗಾ ಪೂಜೆಗೂ ಮುನ್ನ ಸೋಂಕಿತ ಹಂದಿಗಳನ್ನು ಕೊಲ್ಲಬೇಕು ಎಂದು ಸೂಚಿಸಿದ್ದಾರೆ. ಇಲಾಖೆ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಿದ ಮುಖ್ಯಮಂತ್ರಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿಯಂತೆ ತಜ್ಞರ ಅಭಿಪ್ರಾಯ ಪಡೆದು ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಸದ್ಯ ಮುಂದಿನ ದಿನಗಳಲ್ಲಿ ಸೋಂಕು ಕಂಡು ಬಂದಿರುವ 12 ಸಾವಿರ ಹಂದಿಗಳಲ್ಲಿ ಕೊಲ್ಲಬೇಕಿದೆ. ಈ ಕಾರ್ಯಾಚಾರಣೆಯಿಂದ ಹಂದಿ ಸಾಗಾಣೆ ಮಾಲೀಕರು ನಷ್ಟ ಅನುಭವಿಸಲಿದ್ದಾರೆ. ಇದಕ್ಕಾಗಿ ಅವರಿಗೆ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ತಕ್ಷಣದಿಂದಲೇ ಈ ಕಾರ್ಯಾಚಾರಣೆ ಮಾಡುವಂತೆ ಸೂಚನೆ ನೀಡಲಾಗಿದೆ. 14 ಜಿಲ್ಲೆಗಳಲ್ಲಿ 30 ಕೇಂದ್ರದ 1 ಕಿ.ಮೀ ಪರಿಧಿಯೊಳಗೆ ಈ ಕಾರ್ಯಾಚಾರಣೆ ನಡೆಸಲಾಗುವುದು. ಈಗಾಗಲೇ ಈ ಕಾರ್ಯಾಚಾರಣೆಯಲ್ಲಿ 18 ಸಾವಿರ ಹಂದಿಗಳನ್ನು ಕೊಲ್ಲಲ್ಲಾಗಿದೆ.
Comments are closed.