ರಾಷ್ಟ್ರೀಯ

ಸುಪ್ರೀಂ ಕೋರ್ಟ್ ಗೆ ಮೊರಟೋರಿಯಂ ಅವಧಿಯ ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ ಸರ್ಕಾರ

Pinterest LinkedIn Tumblr

ನವದೆಹಲಿ: ಮೊರಟೋರಿಯಂ ಅವಧಿಯಲ್ಲಿನ ಬಡ್ಡಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್​ಗೆ ತಿಳಿಸಿದೆ.

ಆದರೆ ಇದು 2 ಕೋಟಿ ರೂಪಾಯಿವರೆಗಿನ ಸಾಲಕ್ಕೆ ಮಾತ್ರ ಅನ್ವಯ. ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಎಲ್ಲ ಕೆಟಗರಿಗಳ ಸಾಲಗಳನ್ನೂ ಈ ವ್ಯಾಪ್ತಿಗೆ ತರಲಾಗುವುದಿಲ್ಲ. ಒಂದೊಮ್ಮೆ ಎಲ್ಲ ಸಾಲಗಳ ಬಡ್ಡಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದರೆ ಬ್ಯಾಂಕ್​ಗಳ ಮೇಲಿನ ಹೊರೆ ಹೆಚ್ಚಾಗಿ, ಅವುಗಳ ಅಸ್ತಿತ್ವಕ್ಕೆ ತೊಂದರೆಯಾದೀತು ಎಂಬ ಅಂಶದ ಉಲ್ಲೇಖವಿದೆ. ಆದರೆ, ಅನಿವಾರ್ಯ ಸಂದರ್ಭ, ಸನ್ನಿವೇಶದಲ್ಲಷ್ಟೇ ಬಡ್ಡಿ ಮನ್ನಾ ಮಾಡುವ ಆಯ್ಕೆಯ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಲ್ಲದು. ಈ ಸಂಬಂಧ ನಿರ್ಣಯ ತೆಗೆದುಕೊಂಡರೆ ಅದಕ್ಕೆ ಸಂಸತ್ತಿನ ಅಂಗೀಕಾರವೂ ಬೇಕಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.

ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ( ಎಂಎಸ್​ಎಂಇ), ಶಿಕ್ಷಣ ಸಾಲ, ಮನೆಸಾಲ, ಗ್ರಾಹಕ ಉತ್ಪನ್ನದ ಸಾಲ, ಕ್ರೆಡಿಟ್ ಕಾರ್ಡ್​ ಸಾಲ, ವಾಹನ ಸಾಲ, ವೈಯಕ್ತಿಕ ಮತ್ತು ವೃತ್ತಿಪರ ಹಾಗೂ ಗ್ರಾಹಕಬಳಕೆ ಸಾಲ ಸೇರಿ ಎಂಟು ಸೆಕ್ಟರ್​ಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಕ್ಕೆ ಅವಕಾಶವಿದೆ. ಬ್ಯಾಂಕುಗಳು ಎಷ್ಟರಮಟ್ಟಿಗೆ ಹೊರೆಯನ್ನು ಹೊರುವುದಕ್ಕೆ ಶಕ್ಯವಾಗಿದೆ ಎಂಬುದನ್ನು ಆಧರಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Comments are closed.