ನವದೆಹಲಿ: ಕೊರೋನಾ ಹಿನ್ನೆಲೆ ದೆಹಲಿ-ಎನ್‌ಸಿಆರ್, ಮುಂಬೈ, ಚೆನ್ನೈ, ಪುಣೆ, ಕೋಲ್ಕತಾ, ಮತ್ತು ಅಹಮದಾಬಾದ್‌ಗಳಲ್ಲಿ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಮನೆಗಳ ಮಾರಾಟ ಬೆಲೆಗಳಲ್ಲಿ ಇಳಿಕೆಯಾಗಿದೆ ಎಂದು ನೈಟ್ ಫ್ರಾಂಕ್ ಇಂಡಿಯಾ ತಿಳಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 2-7ರಷ್ಟು ಇಳಿಕೆಯಾಗಿದೆ ಎಂದು ಅದು ಹೇಳಿದೆ. ಆದಾಗ್ಯೂ, ಕಳೆದ ವರ್ಷದ ಈ ಅವಧಿಗೆ ಹೋಲ್ಲಿಸಿದರೆ 2020 ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಬೆಲೆಗಳು ಕ್ರಮವಾಗಿ 3 ಮತ್ತು 4 ಶೇಕಡಾದಷ್ಟು ಹೆಚ್ಚಾಗಿದೆ. ಚೆನ್ನೈ ಗರಿಷ್ಠ ಶೇಕಡಾ 7 ರಷ್ಟು ಕುಸಿತ ಕಂಡರೆ, ದೆಹಲಿ-ಎನ್‌ಸಿಆರ್ ಮತ್ತು ಪುಣೆಗಳಲ್ಲಿ ಬೆಲೆಯು ಶೇ. 5ರಷ್ಟು ಕುಸಿತ ದಾಖಲಿಸಿದೆ.
ಕೋಲ್ಕತಾ ಮತ್ತು ಅಹಮದಾಬಾದ್‌ನಲ್ಲಿ ಮನೆಗಳ ಮಾರಾಟ ದರಗಳು ಸರಾಸರಿ ಶೇ. 3ರಷ್ಟು ಇಳಿಕೆಯಾಗಿದ್ದರೆ ಮುಂಬೈ ಶೇ 2 ರಷ್ಟು ಬೆಲೆ ಕುಸಿತಕ್ಕೆ ಕಾರಣವಾಗಿದೆ. “ಹೈದರಾಬಾದ್ ಮತ್ತು ಬೆಂಗಳೂರು ಮಾತ್ರ ಕ್ರಮವಾಗಿ 4 ಮತ್ತು 3 ಶೇಕಡಾ (ಇಯರ್ ಆನ್ ಇಯರ್) ಬೆಲೆ ಏರಿಕೆಗೆ ಸಾಕ್ಷಿಯಾಗಿದೆ, ಏಕೆಂದರೆ ಈ ನಗರಗಳಲ್ಲಿ ಅಂತಿಮ ಬಳಕೆದಾರರ ಮಾರುಕಟ್ಟೆಯಲ್ಲಿ ಡೆವಲಪರ್ ಗಳುಬೇಡಿಕೆ-ಪೂರೈಕೆಗಳ ನಡುವೆ ಬೆಲೆಗಳ ಮಟ್ಟವನ್ನು ಕಾಯ್ದುಕೊಂಡಿದ್ದಾರೆ” ನೈಟ್ ಫ್ರಾಂಕ್ ಇಂಡಿಯಾ ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ವರದಿಯ ಪ್ರಕಾರ, ಈ ಕ್ಯಾಲೆಂಡರ್ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿಮನೆ ಮಾರಾಟವು 33,403 ಯುನಿಟ್ ಆಗಿದ್ದು, ಇದು ಹಿಂದಿನ ತ್ರೈಮಾಸಿಕದಲ್ಲಿ ದಾಖಲಾದ 9,632 ಯುನಿಟ್‌ಗಳಿಗಿಂತ 3.5 ಪಟ್ಟು ಹೆಚ್ಚಾಗಿದೆ.”ಮಾರಾಟ ಹಾಗೂ ಲಾಂಚ್ ಗಳಲ್ಲಿ ಅರ್ಥಪೂರ್ಣ ಸುಧಾರಣೆ ಕಂಡುಬಂದಿದೆ. ಡೆವಲಪರ್‌ಗಳು ಮನೆಗಳನ್ನು ಮಾರಾಟ ನಡೆಸಿ ಆರ್ಡರ್ ಗಳನ್ನು ಖಾಲಿಮಾಡುವತ್ತ ಗಮನ ನೀಡಿದ್ದಾರೆ. ಸಿದ್ಧ ಆಸ್ತಿಗಳನ್ನು ಖರೀದಿಸಲು ಒಲವು ತೋರುವ ಹೋಮ್ ಬೈಯರ್ ಗಳು ಈ ತ್ರೈಮಾಸಿಕದಲ್ಲಿ ಮಾರಾಟವಾಗದ ಮನೆಗಳ ಸಂಖ್ಯೆಯನ್ನು ಕಡಿಮೆಯಾಗಿಸಿದ್ದಾರೆ.” ಎಂದು ನೈಟ್ ಫ್ರಾಂಕ್ ಇಂಡಿಯಾ ಸಿಎಂಡಿ ಶಿಶಿರ್ ಬೈಜಾಲ್ ಹೇಳಿದ್ದಾರೆ.
ಮುಂಬೈ ಮತ್ತು ಪುಣೆಯಂತಹ ಮಾರುಕಟ್ಟೆಗಳಿಗೆ, ಸ್ಟಾಂಪ್ ಡ್ಯೂಟಿ ರೂಪದಲ್ಲಿ ರಾಜ್ಯ ಸರ್ಕಾರವು ಹೆಚ್ಚುವರಿ ಉತ್ತೇಜನ ಡಿಮಾಂಡ್ ಪ್ರೊಡಕ್ಷನ್ ಗೆ ಸಹಾಯಮಾಡಿದೆ. , ಡೆವಲಪರ್‌ಗಳಿಗೆ ಹಬ್ಬದ ಋತುವು ನಿರ್ಣಾಯಕವಾಗಿರುತ್ತದೆ. ಅಂತಿಮ ಬಳಕೆದಾರರು ತಮ್ಮ ಹೂಡಿಕೆಗಳನ್ನು ಮಾಡಲು ಸಾಕಷ್ಟು ಆರ್ಥಿಕ ಸ್ಥಿರತೆಯನ್ನು ಹೊಂದಿರುವ ಸೂಕ್ತ ಸಮಯವೆಂದು ಇದು ಸಾಬೀತುಪಡಿಸಬಹುದು. ಮುಂದಿನ ತಿಂಗಳುಗಳಲ್ಲಿ ಮಾರಾಟದ ಮೇಲಿನ ದೃಷ್ಟಿಕೋನವು ಆರ್ಥಿಕತೆಯ ಚೇತರಿಕೆಯ ವೇಗ ಮತ್ತು ಪಥವನ್ನು ಅವಲಂಬಿಸಿರುತ್ತದೆ “ಎಂದು ಬೈಜಾಲ್ ಹೇಳಿದರು.
ಏಪ್ರಿಲ್-ಜೂನ್ ಅವಧಿಗೆ ಹೋಲಿಸಿದರೆ ಮಾರಾಟವು ಸುಧಾರಿಸಿದೆ ಏಕೆಂದರೆ ಡೆವಲಪರ್‌ಗಳು ಖರೀದಿದಾರರನ್ನು ಆಕರ್ಷಿಸಲು ಹಣಕಾಸಿನ ಬೆನಿಫಿಟ್ ಗಳನ್ನು, ರಿಯಾಯಿತಿ ಮತ್ತು ಸುಲಭ ಪಾವತಿ ಆಯ್ಕೆಗಳನ್ನು ನೀಡಿದರು. ಗೃಹ ಸಾಲದಮೇಲಿನ ಕಡಿಮೆ ಬಡ್ಡಿದರವು ಮನೆಯ ಮಾರಾಟದಲ್ಲಿ ಬೆಳವಣಿಗೆಗೆ ಕಾಅಣವಾಗಿತ್ತದೆ. ಬಿಲ್ಡರ್ ಗಳು ಗ್ರಾಹಕರೊಂದಿಗೆ ತೊಡಗಿಸಿಕೊಳ್ಳಲು ಡಿಜಿಟಲ್ ಮಾರ್ಗ ಅನುಸರಿಸಿದ್ದಾರೆ. ಲಾಕ್‌ಡೌನ್‌ನ ಹಿಂದಿನ ದಿನಗಳಲ್ಲಿ ಅನುಭವಿಸಿದ ತೀವ್ರವಾದ ಕಾರ್ಮಿಕ ಬಿಕ್ಕಟ್ಟು ಸಹ ಸರಾಗವಾಗಲು ಪ್ರಾರಂಭವಾಗಿದ್ದು ಕಾರ್ಮಿಕರು ಉದ್ಯೋಗವನ್ನು ಹುಡುಕಿ ಮತ್ತೆ ಮಹಾನಗರಗಳತ್ತ ಬರುತ್ತಿದ್ದಾರೆ ಇಷ್ಟಾಗಿಯು , ವಸತಿ ಮಾರಾಟ ವಲಯ 2020 ರ ಮೂರನೇ ತ್ರೈಮಾಸಿಕದಲ್ಲಿ ಸುಧಾರಣೆಯ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದೆ” ಎಂದು ಅವರು ಹೇಳಿದರು.
Comments are closed.