ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ಐದು ಪ್ರಮುಖ ಅಂಶ

Pinterest LinkedIn Tumblr


ನವದೆಹಲಿ: ಲಾಕ್ ಡೌನ್ ಸಮಯದಿಂದ ಇಲ್ಲಿಯವರೆಗೆ ದೇಶವನ್ನುದ್ದೇಶಿಸಿ 7ನೇ ಬಾರಿ ಭಾಷಣ ಮಾಡಿದ ಅವರು, ಹಬ್ಬದ ಸಮಯದಲ್ಲಿ ಜನರು ಮೈಮರೆಯದಂತೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.

ಹಬ್ಬಗಳ ಸಾಲುಗಳು ನಮ್ಮ ಮುಂದೆ ಇದ್ದು, ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದ ಅವರು, ಇದೇ ವೇಳೆ ನವರಾತ್ರಿ, ಈದ್, ದೀಪಾವಳಿ, ಚಥ್​​​ ಪೂಜಾ ಶುಭಾಶಯ ತಿಳಿಸಿದರು

1.ಜೀವನದ ಉದ್ದೇಶಕ್ಕಾಗಿ ನಾವು ಹೊರಬರುತ್ತಿದ್ದೇವೆ. ಲಾಕ್​ಡೌನ್​ ಮುಗಿಯಿತು ಎಂದ ಮಾತ್ರಕ್ಕೆ ವೈರಸ್​ ಕೊನೆಗೊಂಡಿಲ್ಲ ಎಂಬುದನ್ನು ಮರೆಯಬಾರದು.
2.ಹಬ್ಬದ ಸಮಯ ಎಂಬುದು ಜೀವನದ ಖುಷಿ. ಈ ವೇಳೆ ಬೇಜಾವಬ್ದಾರಿ ವಹಿಸಿದರೆ, ಭಾರೀ ದಂಡ ತೆರೆಬೇಕಾಗುತ್ತದೆ. ಈ ಸಮಯದಲ್ಲಿ ಎಚ್ಚರದಿಂದ ಇದ್ದರೆ, ಉತ್ತಮ ದಿನಗಳು ನಮ್ಮ ಮುಂದಿರಲಿದೆ.
3. ಅಮೆರಿಕ, ಯುರೋಪ್​ಗಳಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದಂತೆ ಹೆಚ್ಚಾಗಿದ್ದನ್ನು ಜನರು ಮರೆಯಬಾರದು.
4.ಹಬ್ಬದ ಸಮಯಲ್ಲಿ ಜನರು ಜಾಗರುಕತೆಯಿಂದ ಮೂರು ಮಂತ್ರಗಳಾದ ಸ್ವಚ್ಛತೆ, ಮಾಸ್ಕ್​ಧಾರಣೆ, ಸಾಮಾಜಿಕ ಅಂತರಗಳನ್ನು ಅನುಸರಿಸಬೇಕು.
5.ನಿಮ್ಮನ್ನು ನೀವು ಕಾಪಾಡಿಕೊಳ್ಳುವ ಮೂಲಕ ಇದೇ ದೇಶಕ್ಕೆ ನೀಡುವ ಸೇವೆ. ಈ ವಿಷಯದಲ್ಲಿ ನೀವು ನಮಗೆ ಜೊತೆಯಾಗಬೇಕು.

Comments are closed.