ವ್ಯಕ್ತಿಯೊಬ್ಬರು ಹಬ್ಬದ ಸೀಸನ್ನಲ್ಲಿ ಆಫರ್ ಬೆಲೆಗೆ ಐಫೋನ್ ಸಿಗುತ್ತಿದೆ ಎಂದು ಖರೀದಿಸಿ ಮೋಸ ಹೋದ ಘಟನೆ ಬೆಳಕಿಗೆ ಬಂದಿದೆ.
ದೆಹಲಿ ಮೂಲದ ಯ್ಯೂಟೂಬರ್ ರಾಫ್ ಎಂಬವರು ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ನಲ್ಲಿ ಐಫೋನ್ 11 ಖರೀದಿಸಿದ್ದಾರೆ. 64ಜಿಬಿ ಸ್ಟೊರೇಜ್ ಆಯ್ಕೆಯ ಫೋನನ್ನು ಖರೀದಿಸಿದ್ದಾರೆ. ಆದರೆ ಐಫೋನ್ 11 ಅನ್ನು ಬಾಕ್ಸ್ನಿಂದ ತೆರೆದು ನೋಡಿದಾಗ ನಕಲಿ ಫೋನ್ ಎಂದು ಗೊತ್ತಾಗಿದೆ.
ನಂತರ ತನ್ನ ಯ್ಯೂಟೂಬ್ ಖಾತೆಯಲ್ಲಿ ನಕಲಿ ಐಫೋನ್ 11 ಬಂದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಐಫೋನ್ 11 ಬಾಕ್ಸ್ ಹರಿದಿದ್ದು, ಅದರಲ್ಲಿ ಗೀರುಗಳಿವೆ, 64ಜಿಬಿ ಬದಲು 256ಜಿಬಿ ಸ್ಟೊರೇಜ್ ಆಯ್ಕೆಯ ಐಫೋನ್ 11 ನೀಡಲಾಗಿದೆ ಎಂದಿದ್ದಾರೆ.
ನಂತರ ನಕಲಿ ಐಫೋನ್ ಅನ್ನು ರಾಫ್ ಹಿಂತಿರುಗಿಸಲು ಮುಂದಾಗುತ್ತಾರೆ. ವಿತರಣೆ ಮಾಡಿದ್ದ ವ್ಯಕ್ತಿಗೆ ಫೋನ್ಕರೆ ಮಾಡುತ್ತಾರೆ. ಆದರೆ ಆತ ಫೋನ್ ಕರೆಯನ್ನು ಎತ್ತಿಕೊಳ್ಳುತ್ತಿಲ್ಲ. ನಂತರ ರಾಫ್ ಪೊಲೀಸರಿಗೆ ದೂರು ನೀಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಸದ್ಯ ಆನ್ಲೈನ್ ಮಾರಾಟ ಮಳಿಗೆಗಳು ಹಬ್ಬದ ಪ್ರಯುಕ್ತ ಸೇಲ್ ನಡೆಸುತ್ತಿದೆ. ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದೆ, ಅದರಂತೆ ಗ್ರಾಹಕರೂ ಕೂಡ ಕಡಿಮೆ ಬೆಲೆಗೆ ದೊರಕುವ ಸ್ಮಾರ್ಟ್ಫೋನ್, ಐಫೋನ್ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಕೆಲವರು ಇದರಿಂದ ಮೋಸ ಹೋಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
Comments are closed.